UDUPI ; ಬೈಕ್ ಸ್ಕಿಡ್ ಆಗಿ ಬಿದ್ದು ಮಹಿಳೆ ಸಾವು
Saturday, July 22, 2023
ಬೈಕ್ ಸ್ಕಿಡ್ ಆಗಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಉಡುಪಿ ನಿಟ್ಟೆಯಲ್ಲಿ ಸಂಭವಿಸಿದೆ. ನಿಟ್ಟೆ ಗರಡಿ ಬಳಿ ನಿವಾಸಿ ಮಲ್ಲಿಕಾ ಶೆಟ್ಟಿ (42) ಮೃತ ದುರ್ದೈವಿ.
ಮಂಗಳೂರು ತೆರಳಲು ಹೊರಟಿದ್ದ ಮಲ್ಲಿಕಾ ಅವರನ್ನು ಮಗ ಭವಿಷ್ ಶೆಟ್ಟಿ ಬೈಕ್‌ನಲ್ಲಿ ಕೂರಿಸಿಕೊಂಡು ನಿಟ್ಟೆ ಬಸ್ ನಿಲ್ದಾಣಕ್ಕೆ ಹೊರಟಿದ್ದರು. ನಿಟ್ಟೆ ಗರಡಿ ಸಮೀಪ ಬೈಕ್ ಸ್ಕಿಡ್ ಆಗಿ ಮಲ್ಲಿಕಾ ಅವರು ಡಾಮರು ರಸ್ತೆಗೆ ಎಸೆಯಲ್ಪಟ್ಟರು. ಪರಿಣಾಮ ಮಲ್ಲಿಕಾ ಅವರ ತಲೆಗೆ ತೀವ್ರತೆರನಾದ ಗಾಯವಾಗಿ ಸಾವನ್ನಪ್ಪಿದ್ದಾರೆ. ಜೋರು ಮಳೆಗೆ ಮಹಿಳೆ ಕೊಡೆ ಬಿಡಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.