UDUPI ; ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವು
Tuesday, June 20, 2023
ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ನಿರ್ಮಿತ (19) ಸಾವನ್ನಪ್ಪಿದ ಯುವತಿ. ನಿನ್ನೆ ಹೆಬ್ರಿ ಆಗುಂಬೆ ಘಾಟಿ ತಿರುವಿನಲ್ಲಿ ಬಸ್ ಮತ್ತು ಬೈಕ್ ಢಿಕ್ಕಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಶಾಂಕ್ ಸ್ಥಳದಲ್ಲಿ ಮೃತಪಟ್ಟು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹಸವಾರೆ ನಿರ್ಮಿತ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ .
ಬೈಕಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಖಾಸಗಿ ಬಸ್ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಹೆಬ್ರಿ ಆಗುಂಬೆ ಘಾಟಿಯಲ್ಲಿ ಅಪಘಾತ ನಡೆದಿತ್ತು. ಒಂದೇ ಕುಟುಂಬದ 6 ಮಂದಿ ಮೂರು ಬೈಕ್‌ನಲ್ಲಿ ಭಾನುವಾರ ಬೆಳಗ್ಗೆ ಹೊರಟಿದ್ದರು. ಶಶಾಂಕ್ ಅವರ ಜತೆ ಹಿಂಬದಿ ಸವಾರರಾಗಿ ಅಕ್ಕನ ಮಗಳು ನಿರ್ಮಿತಾ ಕುಳಿತಿದ್ದರು. ನಿರ್ಮಿತ ದ್ವಿತೀಯ ಪಿಯುಸಿ ಮುಗಿಸಿ ಪದವಿ ಕಾಲೇಜಿಗೆ ಸೇರಿದ್ದರು.