UDUPI ; ಬಾವಿಗಿಳಿದು ಬೆಕ್ಕನ್ನು ರಕ್ಷಣೆ ಮಾಡಿದ ಪೇಜಾವರ ಶ್ರೀ
Monday, June 19, 2023
40 ಅಡಿ ಬಾವಿಗಿಳಿದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಗಳು ಬೆಕ್ಕಿನ ಮರಿಯ ರಕ್ಷಣೆ ಮಾಡಿದ್ದಾರೆ. ಉಡುಪಿಯ ಅಲೆವೂರು ಸಮೀಪದ ಮುಚ್ಲಕೋಡು ಬಳಿ ಈ ಘಟನೆ ನಡೆದಿದೆ.
ಬೆಕ್ಕು ಬಾವಿಗೆ ಬಿದ್ದ ವಿಷಯ ತಿಳಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ತಾವೇ ಸ್ವತಃ ಬಾವಿಗಿಳಿಯುವುದಾಗಿ ಹೇಳಿದರು. ಮುಚ್ಲಕೋಡು ದೇಗುಲಕ್ಕೆ ಬಂದ ಸಂದರ್ಭ ಸ್ವಾಮೀಜಿಗೆ ಬೆಕ್ಕು ಬಾವಿಗೆ ಬಿದ್ದಿರುವ ವಿಚಾರ ಗಮನಕ್ಕೆ ಬಂತು.
ಕೂಡಲೇ ಹಿಂದು ಮುಂದು ನೋಡದೆ ಹಗ್ಗದ ಸಹಾಯದಿಂದ ಸ್ವಾಮೀಜಿ ಬಾವಿಗಿಳಿದರು. ಗೋವಿನ ರಕ್ಷಣೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಪೇಜಾವರ ಶ್ರೀಗಳು ಹಾವು, ಹದ್ದು ಹೀಗೆ ಸಕಲ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡುತ್ತಿರುತ್ತಾರೆ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಈ ಪ್ರಾಣಿಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.