UDUPI : 30 ವರ್ಷಗಳ ಬಳಿಕ ಆರೋಪಿ ಬಂಧನ
Thursday, June 22, 2023
30 ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ನಿವಾಸಿ ವಾರಂಟು ಅಸಾಮಿ ಹೊನ್ನ ಅಲಿಯಾಸ್ ಹೊನ್ನಪ್ಪ,
1993ರಲ್ಲಿ ಉಡುಪಿಯ ಶಂಕರನಾರಾಯಣ ಗ್ರಾಮದಲ್ಲಿ ನಡೆದ ಕಳ್ಳತನ ನಡೆಸಿದ್ದ. ಆರೋಪಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈತನನ್ನು ಗದಗ ಜಿಲ್ಲೆಯಲ್ಲಿ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಂಕರನಾರಾಯಣ ಗ್ರಾಮದ ಕಾರೇಬೈಲು ಎಂಬಲ್ಲಿ 1993ರಲ್ಲಿ ಈತ ಟೆಲಿಫೋನ್ ಕಂಬಿಗಳ ಮಧ್ಯದಿಂದ ಸುಮಾರು 100 ಮೀಟರ್ ಉದ್ದದ ತಾಮ್ರದ ಕೇಬಲ್ ತಂತಿಯನ್ನು ತುಂಡರಿಸಿ ಕಳವು ಮಾಡಿದ್ದ.