-->
UDUPI ; ನಿಕಿತಾ ಸಾವು ಪ್ರಕರಣ : ತನಿಖೆಗೆ ಆಗ್ರಹ

UDUPI ; ನಿಕಿತಾ ಸಾವು ಪ್ರಕರಣ : ತನಿಖೆಗೆ ಆಗ್ರಹ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ನಿಕಿತಾ( 20) ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಸಾವಿಗೆ ವೈದ್ಯರ ನಿರ್ಲಕ್ಷ್ಯ ಎಂದು ಪೋಷಕರು ಆರೋಪ ಮಾಡಿದ್ದಾರೆ.
 ಬುಧವಾರದಂದು ಹೊಟ್ಟೆ ನೋವೆಂದು ದಾಖಲಾಗದ ಹುಡುಗಿ ಭಾನುವಾರ ಇಹಲೋಕ ತ್ಯಜಿಸಿದ್ದಾಳೆ. ಇದೇ ವಿಚಾರವಾಗಿ ಆಸ್ಪತ್ರೆಯವರ ನಿರ್ಲಕ್ಷದಿಂದಾಗಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎನ್ನುವ ಆಡಿಯೋ ಸಂದೇಶವನ್ನು ಕರಾವಳಿಯಂತೆ ವೈರಲ್ ಆಗಿತ್ತು.  ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಮೂಹ ಶಾವಿಗೆ ಸ್ಪಷ್ಟ ಉತ್ತರ ನೀಡುವಂತೆ ಆಸ್ಪತ್ರೆಗೆ ನುಗ್ಗುವ ಯತ್ನ ಮಾಡಿದೆ.
ಕೊನೆಗೆ ನಿಕಿತಾ ಪೋಷಕರ ಮನವಿ ಮೇರೆಗೆ ಪ್ರತಿಭಟನೆ ವಾಪಾಸು ಪಡೆದ ABVP ಸಂಘಟನೆ, ಒಂದು ವಾರದ ಒಳಗಾಗಿ ನಿಕಿತಾ ಮನೆಗೆ ಸೂಕ್ತ ಪರಿಹಾರ ನೀಡಬೇಕು ಜೊತೆಗೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಅಂತ ಬೇಡಿಕೆ ಇಟ್ಟಿದೆ.

Ads on article

Advertise in articles 1

advertising articles 2

Advertise under the article