ಇನಾಯತ್ ಅಲಿಗೆ ಬೆಂಬಲ ಘೋಷಿಸಿದ ಮೊಯ್ದೀನ್ ಬಾವಾ ಆಪ್ತ
Thursday, May 4, 2023
ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಇನಾಯತ್ ಅಲಿಯ ಜನಪ್ರಿಯತೆಗೆ ಹೆಚ್ಚಿನ ಬೆಂಬಲ ದೊರಕುತ್ತಿದೆ. ಇದೀಗ ಬಾವಾ ಪಾಳಯದಲ್ಲಿ ಗುರುತಿಸಿಕೊಂಡಿದ್ದ, ಅವರ ಅತ್ಯಾಪ್ತ, ಅವರ ಚಾಲಕರಾಗಿದ್ದ ನಿಝಾಮ್ ಗುರುಪುರ ಮತ್ತೆ ಇನಾಯತ್ ಅಲಿಗೆ ಬೆಂಬಲ ಘೋಷಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಜಿಲ್ಲೆಯಲ್ಲಿ ಬೆಂಬಲವಿಲ್ಲ. ಹೀಗಾಗಿ ಜೆಡಿಎಸ್‌ನ್ನು ಬೆಂಬಲಿಸಿದರೆ ಅದು ಬಿಜೆಪಿಗೆ ಸುಲಭದ ದಾರಿ ಮಾಡಿ ಕೊಟ್ಟಂತೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ಮಿತ್ರರು ಮೊಯ್ದೀನ್ ಬಾವಾ ಗೆ ನೀಡಿದ ಬೆಂಬಲ ವಾಪಸ್ ಪಡೆದು ಇನಾಯತ್ ಅಲಿ ಯನ್ನು ಬೆಂಬಲಿಸುತ್ತಿದ್ದೇವೆ ಎಂದರು.
ಒಟ್ಟಿನಲ್ಲಿ ಜಾತ್ಯಾತೀತ ಶಕ್ತಿಯು ಗೆಲ್ಲಬೇಕಿದ್ದು, ಕೋಮುವಾದ ಸೋಲಬೇಕಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.