-->

UDUPI : ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ : ನಟ ರಕ್ಷಿತ್ ಶೆಟ್ಟಿ

UDUPI : ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ : ನಟ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯ ಕುಕ್ಕಿಕಟ್ಟೆ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.  ಮತದಾನ ಮಾಡಲೆಂದೇ ಬೆಂಗಳೂರಿನಿಂದ ಬಂದಿದ್ದ ರಕ್ಷಿತ್ ಶೆಟ್ಟಿ, 
ತನ್ನ ಮನೆಯ ಮುಂಭಾಗದಲ್ಲೇ ಇರುವ ಶಾಲೆಯಲ್ಲಿ ತಂದೆ ಶ್ರೀಧರ ಶೆಟ್ಟಿ ,ತಾಯಿ ರಂಜನಾ ಶೆಟ್ಟಿ ,ಸಹೋದರ ರಂಜಿತ್ ಶೆಟ್ಟಿ ಜೊತೆಗೆ ಬಂದು ಮತದಾನ ಮಾಡಿದ್ದಾರೆ. ಮತದಾನ ಮಾಡಲು ಬೆಂಗಳೂರಿನಿಂದ ಬಂದಿದ್ದೇನೆ. ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ. ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. 
ನಾನು ಚಿಕ್ಕವನಾಗಿದ್ದಾಗ ಉಡುಪಿ ನಗರ ಬೆಳೆಯಬೇಕು ಎಂದು ಆಸೆ ಇತ್ತು.‌ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಾಯಕನಾದವ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು . ಕ್ಷೇತ್ರದ ಜನರ  ಬೇಡಿಕೆಗಳನ್ನು ಈಡೇರಿಸಬೇಕು ಅಂತ ಹೇಳಿದ್ದಾರೆ. ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನಕ್ಕೆ ಕಾಳಜಿ ಜಾಸ್ತಿ. ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಸಿಟಿ ಲೈಫ್ ಬೇರೆ ಆಗಿರುತ್ತದೆ ಯಾವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಅಂತ ನಾವು ನಿರೀಕ್ಷೆ ಮಾಡುತ್ತಿದ್ದೇವೆ. ಯುವಜನರು ಯಾರನ್ನು ಆಯ್ಕೆ ಮಾಡುತ್ತಾರೆ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ
ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು ಹೊಸ ನಾಯಕರು ಬಂದಾಗ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ ಅಂತ ರಕ್ಷಿತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99