UDUPI : ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅಮಿತ್ ಶಾ ಗರಂ?? ವಿರುದ್ಧ ವೈರಲ್
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೇಲೆ ಅಮಿತ್ ಶಾ ಗರಂ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ನಿನ್ನೆ ಅಮಿತ್ ಶಾ ಸಿದ್ಧಾಪುರ ದಲ್ಲಿ ರೋಡ್ ಶೋ ಸಂದರ್ಭ ನಡೆದ ಘಟನೆ ಇದಾಗಿದ್ದು, ಅಮಿತ್ ಶಾ ತೆರೆದ ವಾಹನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಲು ಪ್ರಾರಂಭಿಸಿದ್ದರು.
ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಲು ಪ್ರತಾಪಸಿಂಹ ಅವರಿಗೆ ಶಾ ತಿಳಿಸಿದರು. ಆದರೆ ನೆರೆದಿದ್ದ ಜನತೆ ಹಿಂದಿಯಲ್ಲೆ ಭಾಷಣ ಮುಂದುವರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಅಮಿತ್ ಶಾ ಅವರಿಗೆ ಜನ ಹಿಂದಿಯಲ್ಲಿ ಭಾಷಣ ಕೇಳುತ್ತಿದ್ದಾರೆ ಅಂತ ಕೋಟ ಹೇಳಿದ್ದಾರೆ.
ಈ ವೇಳೆ ಕೋಪಗೊಂಡ ಅಮಿತ್ ಶಾ ಕೋಟ ಅವರತ್ತ ತಿರುಗಿ ನನಗೆ ಗೊತ್ತಾಯ್ತು ಎಂದು ಗದರಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಜನ ಸೇರಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಶಾ ಕೋಟಗೆ ಬೈದರು ಎನ್ನುವ ಅಡಿ ಬರಹದಡಿ ವೈರಲ್ ಆಗುತ್ತಿದೆ.