UDUPI : ಕಾರ್ಕಳದಲ್ಲಿ ಮುಗಿದ ಕಾಂಗ್ರೆಸ್ ಟಿಕೆಟ್ ಗೊಂದಲ : ಮುನಿಯಾಳು ವಿರುದ್ಧ ಹರ್ಷ ಮೊಯ್ಲಿ ಕಿಡಿ
Saturday, April 15, 2023
ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಗ್ಗಂಟು ಮತ್ತೆ ಮುಂದುವರಿದೆ. ಮುನಿಯಾಳು ಉದಯ ಕುಮಾರ್ ಶೆಟ್ಟಿ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಮಧ್ಯೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ ಟ್ವೀಟ್ ಮಾಡಿ ಉದಯ್ ಕುಮಾರ್ ಶೆಟ್ಟಿ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ೪೦ ಪರ್ಸೆಂಟ್ ಕಮಿಷನ್ ಸರ್ಕಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ ಉಡುಪಿಯಲ್ಲಿ ಗುತ್ತಿಗೆದಾರರ ಸಂಘದ ಜತೆ ಪತ್ರಿಕಾಗೋಷ್ಠಿ ನಡೆಸಿದ್ದ ಉದಯಕುಮಾರ್ ಶೆಟ್ಟಿ , " ಉಡುಪಿಯಲ್ಲಿ ನಲವತ್ತು ಪರ್ಸೆಂಟ್ ಕಮಿಷನ್ ಇಲ್ಲವೇ ಇಲ್ಲ " ಎಂದು ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದರು. ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನೆ ಮಾಡಿರುವ ಹರ್ಷ ಮೊಯ್ಲಿ " ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಪರಿಗಣಿಸುತ್ತಿರುವುದು ಇದೇ ವ್ಯಕ್ತಿಯನ್ನಾ ? ಇದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಿದ ನಲವತ್ತು ಪರ್ಸೆಂಟ್ ಕಮಿಷನ್ ಆರೋಪವನ್ನು ಸೋಲಿಸಿದಂತಲ್ಲವೇ ? ರಾಷ್ಟ್ರೀಯ ಕಾಂಗ್ರೆಸ್ ಈ ವ್ಯಕ್ತಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಟಿಕೆಟ್ ಆಯ್ಕಗೆ ಮುನ್ನವೇ ಕಾರ್ಕಳದಲ್ಲಿ ಬಣ ರಾಜಕಾರಣ ಭುಗಿಲೆದಿದ್ದು, ಮೊಯ್ಲಿ ಬಣದ ತೀವ್ರ ವಿರೋಧ ಎದುರಿಸುವಂತಾಗಿದೆ.