-->

8 ವರ್ಷಗಳವರೆಗೆ 'ಭಯ್ಯಾ' ಎಂದವನನ್ನೇ ಮದುವೆಯಾಗಿ ಮಗು ಹೊಂದಿದ್ದೇನೆ ಎಂದು ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿ ಯುವತಿ

8 ವರ್ಷಗಳವರೆಗೆ 'ಭಯ್ಯಾ' ಎಂದವನನ್ನೇ ಮದುವೆಯಾಗಿ ಮಗು ಹೊಂದಿದ್ದೇನೆ ಎಂದು ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿ ಯುವತಿನವದೆಹಲಿ: ಉತ್ತರ ಭಾರತದಲ್ಲಿ ಹಿರಿಯ ಸಹೋದರ ಸಮಾನ ವ್ಯಕ್ತಿಯನ್ನು ಭಯ್ಯಾ ಎಂದೇ ಸಂಬೋಧಿಸುತ್ತಾರೆ.  ಆದರೆ ಇಲ್ಲೊಬ್ಬ ಯುವತಿ ತಾನು 8 ವರ್ಷಗಳವರೆಗೆ 'ಭಯ್ಯಾ' ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಇದೀಗ ವಿವಾಹವಾಗಿ ಮಗುವನ್ನು ಪಡೆದಿರುವ ಬಗ್ಗೆ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈಕೆಯ ಹೆಸರು ವಿನಿ. ಈಕೆಯ ಪತಿಯ ಹೆಸರು ಜೈ. ಈ ಸುಂದರ ಜೋಡಿಗೀಗ ಹಿರಿಯರೇ ಮುಂದೆ ನಿಂತು ವಿವಾಹ ಮಾಡಿದ್ದಾರೆ. ಇದೀಗ ಇವರ ದಾಂಪತ್ಯದ ಫಲವಾಗಿ ಒಂದು ಮಗುವೂ ಇದೆ. ಈ ಬಗ್ಗೆ ವಿನಿ ತನ್ನ ಕತೆಯನ್ನು ತಾನೇ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಜಾಲತಾಣದಲ್ಲಿ 5 ಮಿಲಿಯನ್‌ಗೂ ಅಧಿಕ  ವೀಕ್ಷಿಸಿದ್ದಾರೆ‌. ಇದರ ಪರ- ವಿರೋಧ ಚರ್ಚೆಯನ್ನು ಹುಟ್ಟಿಕೊಂಡಿದೆ.


ವೀಡಿಯೋದಲ್ಲಿ ವಿನಿ ಹಾಗೂ ಆಕೆಯ ಪತಿ ಜೈಯ ಹಿಂದಿನ ಫೋಟೋಗಳು ಒಳಗೊಂಡಂತೆ ಅನೇಕ ಫೋಟೋಗಳಿವೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದೆ ಇದೀಗ ಅವರನ್ನೇ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದೇನೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ. ಅಂದಹಾಗೆ ವಿನಿ ಮತ್ತು ಜೈ ಇಬ್ಬರು ಸಂಬಂಧಿಗಳು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವಿದ್ದ ಕಾರಣ ವಿನಿ ಸುಮಾರು 8 ವರ್ಷಗಳವರೆಗೆ ಜೈಯನ್ನು ಭಯ್ಯಾ ಎಂದು ಕರೆಯುತ್ತಿದ್ದರಂತೆ. ಸಂಬಂಧಿಕರು ಇಬ್ಬರ ಮದುವೆ ಮಾಡಿಸಿದ ಬಳಿಕ ಇದೀಗ ಗಂಡ-ಹಂಡತಿಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.

ವಿಡಿಯೋದಲ್ಲಿ ದಂಪತಿಯ ಮಗುವಿನ ಚಿತ್ರಗಳು ಸಹ ಇವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್‌ಗಳು ಬಂದಿವೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99