
UDUPI : ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್
ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದ ಎಲೆಕ್ಟ್ರಿಕ್ ವಾಹನ ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಂಕರ್ಪುರದ ಅರ್ಶಿಕಟ್ಟೆಯಲ್ಲಿ ನಡೆದಿದೆ.
ಜೋಸೆಫ್ ಲೋಬೋ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದರು. ಮನೆಯವರು ಮನೆ ಒಳಗೆ ಇದಾಗ ಎಲೆಕ್ಟ್ರಿಕ್ ಬೈಕ್ ಹೊತ್ತಿಕೊಂಡಿದ್ದು, ನಂದಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ವರ್ಷದ ಹಿಂದಷ್ಟೇ ಜೋಸೆಫ್ ಅವರು ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿದ್ದರು. ಘಟನೆ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..