UDUPI : ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವು
Thursday, April 6, 2023
ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ನಿಡ್ಡೋಡಿಯಲ್ಲಿ ನಡೆದಿದೆ. ಬಜಗೋಳಿ ವಲಯದ ಈದು ಅಂಗನವಾಡಿ ಕಾರ್ಯಕರ್ತೆ ಮಮತಾ(40) ಮೃತಪಟ್ಟ ದುರ್ದೈವಿ.
ಮಮತಾ ಕಟೀಲು ದೇವಸ್ಥಾನಕ್ಕೆ ಹೋಗಿ ತನ್ನ ಪತಿಯ ಬೈಕಿನಲ್ಲಿ ಮನೆಗೆ ವಾಪಾಸಾಗುವ ಸಂದರ್ಭ ನಿಡ್ಡೋಡಿಯಲ್ಲಿ ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ್ದಾರೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.