
UDUPI : ಪರೀಕ್ಷೆ ಮುಗಿಯಿತು ಹುರ್ರೆ.. ಶಿಕ್ಷಕಿ ಸಖತ್ ಡ್ಯಾನ್ಸ್ ..!
Tuesday, March 28, 2023
ಸದ್ಯ ಶಾಲಾ ಮಕ್ಕಳಿಗೆ ಪರೀಕ್ಷಾ ಸಮಯ. ಕೆಲ ಶಾಲೆಗಳಲ್ಲಿ ಪರೀಕ್ಷೆ ಮುಗಿದಿದೆ. ಹೀಗೆ ಪರೀಕ್ಷೆ ಬರೆದು ಮುಗಿಸಿದ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕಿಯೊಬ್ಬರು ಸಖತ್ ನೃತ್ಯ ಮಾಡಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಜೇಸಿಸ್ ಶಾಲೆಯ ನರ್ಸರಿ, ಎಲ್‌ಕೆಜಿ ಯುಕೆಜಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕಿ ವಂದನಾ ರೈ ನೃತ್ಯ ಮಾಡಿ, ಪುಟಾಣಿಗಳನ್ನು ಸಂತೋಷ ಪಡಿಸಿದ ವಿಡಿಯೋ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎರಡು ಮಿಲಿಯನ್‌ಗೂ ಹೆಚ್ಚು ಜನ ನೋಡಿದ್ದಾರೆ.
ನರ್ಸರಿ ಎಲ್‌ಕೆಜಿ ಯುಕೆಜಿ ಮಕ್ಕಳಿಗೆ ಶಿಕ್ಷಕಿ ವಂದಾನಾ ರೈ, ಪರೀಕ್ಷೆ ಚೆನ್ನಾಗಿ ಬರೆಯಿರಿ ಅಂತ ಶುಭ ಹಾರೈಸಿ ಬಳಿಕ ಡ್ಯಾನ್ಸ್ ಮಾಡೋಣ ಅಂದಿದ್ದರು. ಪರೀಕ್ಷೆ ಮುಗಿದ ಬಳಿಕ ತರಗತಿ ಬೋರ್ಡ್ ನಲ್ಲಿ " ಪರೀಕ್ಷೆ ಮುಗಿಯಿತು ಹುರ್ರೆ ಅಂತ ಬರೆದು, ಮ್ಯೂಸಿಕ್ ಹಾಕಿ ಯಾವುದೇ ತಯಾರಿ ಇಲ್ಲದೇ ಸೂಪರ್ ಡ್ಯಾನ್ಸ್ ಮಾಡಿ ಮಕ್ಕಳ ಮೈ ಮನಸ್ಸಿನಲ್ಲಿ ಉಲ್ಲಾಸ ತುಂಬಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮೆಚ್ಚುಗೆ ಪಡೆದಿದೆ.