ಪ್ರಿಯಕರನ ಸಾವಿನ ಸುದ್ದಿ ಕೇಳಿ ಸೀಮೆ ಎಣ್ಣೆ ಸುರಿದುಕೊಂಡು ತಾನೂ ಆತ್ಮಹತ್ಯೆಗೆ ಶರಣಾದ ಪ್ರಿಯತಮೆ
Wednesday, March 29, 2023
ಗುರುಗ್ರಾಮ್: ಪ್ರಿಯಕರ ಆತ್ಮಹತ್ಯೆಗೆ ಶರಣಾದ ಸುದ್ದಿಯನ್ನು ಕೇಳಿ ಮನನೊಂದು ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.
ಮಂಜು (30) ಮೃತ ಯುವತಿ. ಬಿಹಾರ ಮೂಲದ ಮಂಜು ಸೆಕ್ಟರ್ 37 ಪ್ರದೇಶದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ಸಮಯದಿಂದ ದಿನಸಿ ಅಂಗಡಿ ನಿರ್ವಾಹಕ, ಬಾಬುಲಾಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಭಾನುವಾರ ಸಂಜೆ ಯುವಕ ಬಾಬುಲಾಲ್ ಅಕ್ರಮ್ ಗನ್‌ನಿಂದ ತನ್ನನ್ನು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಕೇಳಿ ನೋವು ಸಹಿಸಿಕೊಳ್ಳದೇ ಮಂಜು ತನ್ನ ಬಾಡಿಗೆ ಮನೆಯಲ್ಲಿ ಅದೇ ದಿನ (ಭಾನುವಾರ ರಾತ್ರಿ) ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಂಜು ಅವರನ್ನು ದೆಹಲಿಯ ಸಪ್ಪರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಂಗಳವಾರ ಸಂಜೆ ( ಮಾರ್ಚ್ 28 ರಂದು) ಚಿಕಿತ್ಸೆ ಫಲಿಸದೆ ಮಂಜು ಮೃತಪಟ್ಟಿದ್ದಾರೆ.