UDUPI : ಮತ್ತೆ ಮುರಿದು ಬಿತ್ತಾ ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್..?
Tuesday, March 28, 2023
ಉಡುಪಿ ಮಲ್ಪೆ ಬೀಚ್‌ನಲ್ಲಿ ಇರುವ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ತೇಲಾಡುದಕ್ಕೆ ಅಂತ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕಳೆದ ವರ್ಷ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿತ್ತಾದರೂ, ನಿರ್ಮಿಸಿದ ಕೆಲ ದಿನಗಳಲ್ಲಿಯೇ ಫ್ಲೋಟಿಂಗ್ ಬ್ರಿಡ್ಜ್ ಮುರಿದು ಬಿದ್ದಿತ್ತು. ಹೀಗಾಗಿ ಈ ಬಾರಿ ಮತ್ತೆ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಮುರಿದಿದೆ ಎನ್ನುವ ವದಂತಿ ಹಬ್ಬುತ್ತಿದೆ.
ಜೊತೆಗೆ ಇದರ ವಿಡಿಯೋಗಳು ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟ ಪಡಿಸಿರುವ ಫ್ಲೋಟಿಂಗ್ ಬ್ರಿಡ್ಜ್ ನಿರ್ವಾಹಕರು, ಸಮುದ್ರ ತೀರದಲ್ಲಿ ಜೋರಾದ ಗಾಳಿ ಬೀಸುವ ಸೂಚನೆಯನ್ನು ಹವಮಾನ ಇಲಾಖೆ ನೀಡಿರುವ ಹಿನ್ನೆಲೆ ಸೇತುವೆಯನ್ನು ತೆರವುಗೊಳಿಸಲಾಗಿದೆ. ಕಳೆದ ವರ್ಷದಂತೆ
ಫ್ಲೋಟಿಂಗ್ ಬ್ರಿಡ್ಜ್ ಮುರಿದು ಬಿದಿಲ್ಲ. ಹವಾಮಾನ ಇಲಾಖೆ ಸೂಚನೆ ಮೇರೆಗೆ ತೆರವುಗೊಳಿಸಿ, ಫ್ಲೋಟಿಂಗ್ ಬ್ರಿಡ್ಜ್‌ನಲ್ಲಿ ಸೇರಿಕೊಂಡ ಕಸ, ಚಿಪ್ಪು ಮೊದಲಾದವುಗಳು ತೆಗೆಯುತ್ತಿದ್ದೇವೆ ಅಂತ ಫ್ಲೋಟಿಂಗ್ ಬ್ರಿಡ್ಜ್ ನಿರ್ವಾಹಕರು ತಿಳಿಸಿದ್ದಾರೆ..