
ಮೂಡುಬಿದಿರೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಮೂಡುಬಿದಿರೆ: ತೆಂಗಿನಕಾಯಿಗಳನ್ನು ಕೀಳಲು ಮರಕ್ಕೆ ಹತ್ತಿದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ಭಾನುವಾರ ನಡೆದಿದೆ.
ವಾಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಅಳಿಯೂರು ಕಂಪೊಟ್ಟು ನಿವಾಸಿ ಸಂದೇಶ್ (44) ತೆಂಗಿನಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.
ಸಂದೇಶ್ ಅವರು ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ಇಸಾಕ್ ಎಂಬವರ ಮನೆಗೆ ತೆಂಗಿನಕಾಯಿ ಕೀಳಲು ಬಂದಿದ್ದರು. ಯಂತ್ರವನ್ನು ಬಳಸಿ ತೆಂಗಿನ ಕಾಯಿಗಳನ್ನು ಕೀಳಲು ಮರವೇರಿದ್ದ ಅವರು ನಿಯಂತ್ರಣ ತಪ್ಪಿ ಕೆಳಗಡೆ ಇದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮವಾಗಿ ತಲೆಗೆ ಏಟಾಗಿದ್ದು ಅಲ್ಲಿಯೇ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮೂಲತ: ಕೇರಳದ ಇಡಿಕಿಯವರಾಗಿರುವ ಸಂದೇಶ್ ಅವರಿಗೆ ಪತ್ನಿ ಇದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.