![ಡೆಂಗ್ಯುಗೆ ವಿದ್ಯಾರ್ಥಿನಿ ಬಲಿ ಡೆಂಗ್ಯುಗೆ ವಿದ್ಯಾರ್ಥಿನಿ ಬಲಿ](https://lh3.googleusercontent.com/-90WlMlm07AE/ZBAiI8xkRKI/AAAAAAAAAVw/l607yn3jHcsDj_rXqc8x6bhXCPeG4d1YACNcBGAsYHQ/s1600/1678778908394012-0.png)
ಡೆಂಗ್ಯುಗೆ ವಿದ್ಯಾರ್ಥಿನಿ ಬಲಿ
Tuesday, March 14, 2023
ಮೂಡುಬಿದಿರೆ: ತಾಲೂಕಿನ ಜ್ಯೋತಿನಗರ ನಿವಾಸಿ ಇಲ್ಲಿನ ಆಳ್ವಾಸ್ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಡೆಂಗ್ಯೂಗೆ ಬಲಿಯಾದ ಘಟನೆ ನಡೆದಿದೆ.
ಜ್ಯೋತಿನಗರದ ನಿವಾಸಿ ಮಯ್ಯದ್ದಿ-ರಮ್ಲಾತ್ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ (17) ಡೆಂಗ್ಯುಗೆ ಬಲಿಯಾದ ವಿದ್ಯಾರ್ಥಿನಿ. ಆಳ್ವಾಸ್ ನ ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಕಳೆದ ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು ಬಿಳಿ ರಕ್ತಕಣದ ಇಳಿಕೆಯಿಂದಾಗಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾಳೆನ್ನಲಾಗಿದೆ.