ಕುರುಬನ ರಾಣಿಗೆ ಸೈಬರ್ ವಂಚಕರ ಪಂಗನಾಮ -1 ಲಕ್ಷ ರೂಪಾಯಿ ಕಳೆದುಕೊಂಡ ನಟಿ
Thursday, March 9, 2023
ರಾಜಕಾರಣಿ ಮುಂಬೈ : ನಟಿ ಹಾಗೂ ರಾಜಕಾರಣಿ ನಗಾ ಮೊರಾರ್ಜಿಗೆ ಸೈಬರ್ ವಂಚನೆ ಆಗಿದೆ. ಕೆವೈಸಿ ವಂಚನೆಯಿಂದಾಗಿ ನಗ್ನಾ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಫೆಬ್ರವರಿ 28 ರಂದು ನಟಿ ನಗ್ನಾ 99,998 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಕಳಿಸುವಂಥದ್ದೇ ನಂಬರ್‌ನಿಂದ ನಮ್ಮಾ ಸಂದೇಶ ಸ್ವೀಕರಿಸಿದ್ದರು. ಅದಲ್ಲದೆ, ಇದು ಯಾವುದೇ ಪ್ರೈವೇಟ್ ನಂಬರ್ ಕೂಡ ಆಗಿರಲಿಲ್ಲ ಎಂದು ನಗಾ ಹೇಳಿದ್ದಾರೆ. ಬ್ಯಾಂಕ್ ಖಾತೆ ವಂಚನೆಯ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ವಂಚಿಸಿದ ಇತರ 80 ಸಂತ್ರಸ್ತರಲ್ಲಿ ನಾ ಕೂಡ ಸೇರಿದ್ದಾರೆ.
ನನ್ನ ಮೊಬೈಲ್‌ಗೆ ಬಂದ ಲಿಂಕ್‌ಅನ್ನು ನಾನು ಕ್ಲಿಕ್ ಮಾಡಿದ್ದಾಗಿ 48 ವರ್ಷದ ನಟಿ ಹೇಳಿಕೊಂಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲಿಯೇ ಅವರಿಗೆ ಬ್ಯಾಂಕ್‌ನಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಕೆವೈಸಿ ಅಪ್‌ಡೇಟ್ ಮಾಡಲು ಹಾಗೂ ಯಶಸ್ವಿಯಾಗಿ ಪೂರ್ತಿ ಮಾಡಲು ಮಾರ್ಗದರ್ಶನ ಮಾಡುವುದಾಗಿ ಆತ ಹೇಳಿದ್ದ. ನನ್ನ ಫೋನ್‌ನ ರಿಮೋಟ್ ಆಕ್ಸೆಸ್ ಕೂಡ ಆತ ತೆಗೆದುಕೊಂಡಿದ್ದ. ಆದರೂ, ಲಿಂಕ್‌ನಲ್ಲಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ ಎಂದು ನಮ್ಮಾ ಸ್ಪಷ್ಟಪಡಿಸಿದರು.