ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯಜೀವನಕ್ಕೆ ಕಾಲಿಟ್ಟ ಶ್ರೀಲಂಕಾ ಸ್ಪಿನ್ ಮಾಂತ್ರಿಕ
Thursday, March 9, 2023
ಕೊಲೊಂಬೊ: ಶ್ರೀಲಂಕಾ ತಂಡದಲ್ಲಿ ಸ್ಪಿನ್ ಮಾಂತ್ರಿಕ ಎಂದೇ ಖ್ಯಾತಿಯಾಗಿರುವ ಕ್ರಿಕೆಟಿಗ ವಾನಿಂದು ಹಸರಂಗ ತನ್ನ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆರ್‌ಸಿಬಿ ತಂಡದ ಆಲ್‌ರೌಂಡರ್ ಸಹ ಆಗಿರುವ ವಾನಿಂದು ಹಸರಂಗ, ಗೆಳತಿ ವಿಂದ್ಯಾ ವಿವಾಹದ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಶ್ರೀಲಂಕಾ ತಂಡದಲ್ಲಿ ತನ್ನ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಆಟದಿಂದ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಸರಂಗ. ಆರ್‌ಸಿಬಿ ತಂಡದಲ್ಲಿ ಆಲ್‌ರೌಂಡರ್ ಆಗಿಯೂ ಮಿಂಚಿದ್ದಾರೆ.
ಇಂದು ಮಾರ್ಚ್ 9 ರಂದು ಆತ್ಮೀಯರ ಸಮ್ಮುಖದಲ್ಲಿ ಹಸರಂಗ-ವಿಂದ್ಯಾ ಜೋಡಿಯ ವಿವಾಹ ಮಹೋತ್ಸವ ಜರುಗಿದೆ. ನವ ಜೋಡಿಯ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತ ಆರ್‌ಸಿಬಿ ತಂಡ ಕೂಡ ತನ್ನ
ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಶುಭ ಹಾರೈಸಿದೆ.