
ಟಾಲಿವುಡ್ ನಟನ 2ನೇ ಮದುವೆಯೂ ಸಖತ್ ಗ್ರ್ಯಾಂಡ್; ಮಂಚು ಮನೋಜ್ ಅದ್ಧೂರಿ ವಿವಾಹದ ಫೋಟೋಸ್
Saturday, March 4, 2023
ಮಂಚು ಮನೋಜ್ ಮದುವೆ: ಮಂಚು ಮನೋಜ್ ಅವರ ಎರಡನೇ ವಿವಾಹ ಸಮಾರಂಭ ಫಿಲಂ ನಗರದ ಮಂಚು ನಿಲಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಮನೋಜ್ ತನ್ನ ಆತ್ಮೀಯ ಸ್ನೇಹಿತರು ಹಾಗೂ ಬಂಧುಗಳ ಸಮ್ಮುಖದಲ್ಲು ಭೂಮಾ ಮೌನಿಕಾ ರೆಡ್ಡಿಯನ್ನು ಮದುವೆ ಆಗಿದ್ದಾರೆ.
ಮಂಚು ಮನೋಜ್ ಅವರ ಎರಡನೇ ವಿವಾಹ ಇದಾಗಿದ್ದು ಮದುವೆ ಸಮಾರಂಭ ಮಂಚು ನಿಲಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಭೂಮಾ ಮೌನಿಕಾ ರೆಡ್ಡಿ ಮಂಚು ಮನೋಜ್ ಸಪ್ತಪದಿ ತುಳಿದಿದ್ದಾರೆ. ಮದುವೆ ಫೋಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.
ಮಾರ್ಚ್ 3 ರಂದು ನಡೆದ ಅದ್ಧೂರಿ ಕಲ್ಯಾಣದಲ್ಲಿ ಮಂಚು ಮನೋಜ್- ಭೂಮಾ ಮೌನಿಕಾ ರೆಡ್ಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆ ಆಗಿದೆ. ಇಬ್ಬರೂ ತಮ್ಮ ಜೀವನದಲ್ಲಿ ಏಳು ಹೆಜ್ಜೆ ಇಡುತ್ತಾ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಮನೋಜ್ ಮತ್ತು ಮೌನಿಕಾಗೆ ಶುಭಾಷಯಗಳು ಹರಿದು ಬರ್ತಿವೆ
ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ. ಮೌನಿಕಾಳನ್ನು ಪ್ರೀತಿಸುತ್ತಿದ್ದ ಮಂಚು ಮನೋಜ್ ಈಗ ಅವಳಿಗೆ ಮೂರು ಗಂಟು ಹಾಕಿದ್ದಾರೆ. ಈ ಜೋಡಿಗೆ ಅನೇಕ ಸಿನಿ ಮತ್ತು ರಾಜಕೀಯ ಗಣ್ಯರು ಕೋರುತ್ತಿದ್ದಾರೆ
ಕಳೆದ ನಾಲ್ಕೈದು ದಿನಗಳಿಂದ ಮಂಚು ಮನೋಜ್ ಮದುವೆ ಸುದ್ದಿ ಟ್ರೆಂಡಿಂಗ್ ಆಗಿತ್ತು. ಮೋಹನ್ ಬಾಬು ಈ ಮದುವೆ ಬೇಡ, ಮದುವೆಗೆ ನಾನು ಬರೋದಿಲ್ಲ ಎನ್ನುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದ್ರೆ ಮಹನ್ ಬಾಬು ಅವರು ತಮ್ಮ ಕಿರಿಯ ಪುತ್ರ ಮನೋಜ್ ಮದುವೆಯನ್ನು ಬಹಳ ಅದ್ಧೂರಿಯಾಗೇ ಮಾಡಿದ್ದಾರೆ.
ಭೂಮಾ ಮೌನಿಕಾ ರೆಡ್ಡಿ ಟಿಡಿಪಿ ನಾಯಕಿ ಭೂಮಾ ನಾಗಿರೆಡ್ಡಿ ಅವರ ಮಗಳಾಗಿರುವುದರಿಂದ ಅವರನ್ನು ಸೊಸೆಯಾಗಿ ಸ್ವೀಕರಿಸಲು ಮೋಹನ್ ಬಾಬು ಒಪ್ಪಲಿಲ್ಲ ಎಂಬ ವರದಿಗಳು ಹರಡಿದ್ದವು. ಆದರೆ ಮನೋಜ್ ಮದುವೆಯ ಫೋಟೋಗಳೊಂದಿಗೆ ಆ ಸುದ್ದಿಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಈ ಹಿಂದೆ 2015 ರಲ್ಲಿ ಹೈದರಾಬಾದ್ನ ಪ್ರಣತಿ ರೆಡ್ಡಿ ಅವರನ್ನು ಮದುವೆಯಾಗಿದ್ದ ಮಂಚು ಮನೋಜ್, 4 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಬಳಿಕ 2019 ರಲ್ಲಿ ವಿಚ್ಛೇದನ ಪಡೆದರು. ವೈಯಕ್ತಿಕ ಕಾರಣಗಳಿಂದ ಮಂಚು ಮನೋಜ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇದೀಗ ಮೌನಿಕಾ ಜೊತೆ ಮಂಚು ಮನೋಜ್ ಹೊಸ ಬಾಂಧವ್ಯಕ್ಕೆ ಕಾಲಿಟ್ಟಿದ್ದಾರೆ.
ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮನೋಜ್ 2ನೇ ಮದುವೆಗೆ ರೆಡಿಯಾಗುತ್ತಿರುವುದು ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಆದರೆ ಅಂತಿಮವಾಗಿ ಮನೋಜ್-ಮೌನಿಕಾ ಮದುವೆಯ ಬಂಧದಿಂದ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದು, ಅನೇಕರು ನವ ಜೋಡಿಗೆ ಶುಭಕೋರಿದ್ದಾರೆ.