ವಿದ್ಯೆಗಾಗಿ ಶಾಲೆಗೆ ಬರುವ ಮಕ್ಕಳು ಇಲ್ಲಿ ಮಾಡುವುದು ಮಾತ್ರ ನಾಚಿಗೇಡಿನ ಕೆಲಸ
Sunday, March 5, 2023
ಜೀವನದಲ್ಲಿ ವಿದ್ಯೆ ಬಹಳ ಮುಖ್ಯ. ವಿದ್ಯೆ ಇಲ್ಲದೆ ಜೀವನದಲ್ಲಿ ಮುಂದುವರಿಯುವುದು ಕಷ್ಟವಾಗಬಹುದು. ಈ ಕಾರಣಕ್ಕೆ ಹೆತ್ತವರು ಹೊಟ್ಟೆ ಬಟ್ಟೆ ಕಟ್ಟಿಯಾದರೂ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು ಎಂದು ಹಂಬಲಿಸುತ್ತಾರೆ. ಇದಕ್ಕಾಗಿ ಒಳ್ಳೊಳ್ಳೆಯ ಶಾಲೆಗಳನ್ನು ಕೂಡಾ ಆರಿಸುತ್ತಾರೆ. ತಮ್ಮ ಮಕ್ಕಳಿಗೆ ಯಾವ ಕಷ್ಟವೂ ಬರದೇ ಇರಲಿ ಎನ್ನುವ ಬಯಕೆ ಅವರದ್ದು. ತಾವೆಷ್ಟೇ ಕಷ್ಟಪಟ್ಟರೂ ತಮ್ಮ ಮಕ್ಕಳಿಗೆ ಮಾತ್ರ ನೋವಿನ ಒಂದು ಸಣ್ಣ ಗೆರೆಯೂ ತಾಗಬಾರದು ಎನ್ನುವ ಅಕ್ಕರೆ ತಂದೆ ತಾಯಿಯದ್ದು
ಆದರೆ ಮಕ್ಕಳಿಗೆ ತಂದೆ ತಾಯಿಯ ಭಾವನೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದು ಕೂಡಾ ಬಹಳ ಮುಖ್ಯ. ಯಾಕೆಂದರೆ ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುತ್ತಿರುವ ಕೆಲವು ವಿಡಿಯೋಗಳು, ಇಂಥಹ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ತರಗತಿಯೊಳಗಿರುವ ವಿದ್ಯಾಥಿಗಳಿಬ್ಬರ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ಮಕ್ಕಳ ನೈತಿಕ ಮಟ್ಟ ಎಲ್ಲಿಗೆ ತಲುಪುತ್ತಿದೆ ಎನ್ನುವ ಯೋಚನೆಗೆ ನಮ್ಮನ್ನು ದೂಡುತ್ತದೆ
ಹೌದು, ಈ ಒಂದು ಹುಡುಗ ಮತ್ತೊಬ್ಬ ಹುಡುಗಿಯನ್ನು ಕಾಣಬಹುದು. ಇಲ್ಲಿ ಹುಡುಗಿ ಹುಡುಗನನ್ನು ತಬ್ಬಿಕೊಳ್ಳುವುದು, ಮುತ್ತು ನೀಡಲು ಪ್ರಯತ್ನಿಸುವುದನ್ನು ಗಮನಿಸಬಹುದು. ವಿಶೇಷವೆಂದರೆ, ಇವರು ಈ ರೀತಿ ಮಾಡುತ್ತಿರುವುದನ್ನು ವಿಡಿಯೋ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದ್ದರೂ ತಮ್ಮ ನಡೆಯನ್ನು ಮುಂದುವರೆಸುತ್ತಾರೆ. ಆದರೆ, ಹುಡುಗ ಸ್ವಲ್ಪ ಮಟ್ಟಿಗೆ ಪ್ರತಿರೋಧ ಮಾಡುತ್ತಾನೆ. ಹುಡುಗಿಗೆ ಮಾತ್ರ ಯಾವ ರೀತಿಯ ಅಂಜಿಕೆ ಅಳುಕು ಇಲ್ಲಿ ಕಾಣುವುದಿಲ್ಲ. ಅಲ್ಲೇ ಇರುವ ಇನ್ನೊಂದು ಹುಡುಗಿ ಹುಡುಗನನ್ನು ಮತ್ತೆ ಮತ್ತೆ ಆ ಹುಡುಗಿಯತ್ತ ತಳ್ಳುವುದನ್ನು ಕೂಡಾ ಗಮನಿಸಬಹುದು.
ಬಹಳ ಮುಖ್ಯ. ಅಲ್ಲಿ ಸ್ವಲ್ಪ ಹಾದಿ ತಪ್ಪಿದರೂ ಎಲ್ಲವೂ ಮುಗಿದಂತೆಯೇ. ಸ್ನೇಹಿತರ ಆಯ್ಕೆ ಕೂಡಾ ಇಲ್ಲಿ ಬಹಳ ಮುಖ್ಯ. ಸ್ಬೇಹಿತರು ನಿಮ್ಮನ್ನು ಯಾವ ದಿಕ್ಕಿನತ್ತ ದೂಡುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನ ಹಾಳು ಮಾಡುವ ತಮಾಷೆ ಯಾವತ್ತೂ ಸರಿಯಲ್ಲ. ಹಾಗಂತ ಪ್ರೀತಿ ಪ್ರೇಮ ಮುಖ್ಯ ಅಲ್ಲ ಎಂದಲ್ಲ. ಆದರೆ ಓದು ಬರಹದ ಸಮಯದಲ್ಲಿ ನಿಮ್ಮ ಜೀವನದಲ್ಲಿ ಅವುಗಳಿಗೆ ಜಾಗ ಇಲ್ಲದಿರುವುದೇ ಒಳಿತು.