ಸಂಪೂರ್ಣ ಜಪ್ತಿಯಾಗಲಿದೆ ವಿಜಯ್ ಮಲ್ಯ ಆಸ್ತಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!
Saturday, March 4, 2023
ನವದೆಹಲಿ : ಭಾರತದ ಬ್ಯಾಂಕ್‌ಗಳ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯಗೆ ಶುಕ್ರವಾರ ಸುಪ್ರೀಂ ಕೋರ್ಟ್ ಆಘಾತ ನೀಡಿದೆ.
ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದ ಮುಂಬೈ ಕೋರ್ಟ್ ಅದರ ಬೆನ್ನಲ್ಲಿಯೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೂಡ ಅನುಮತಿ ನೀಡಿತ್ತು. ಮುಂಬೈ ಕೋರ್ಟ್‌ನ ಈ ಆದೇಶದ ವಿರುದ್ಧ ವಿಜಯ್ ಮಲ್ಯ ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ಅದರೆ, ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್‌ನಲ್ಲೂ ರಿಲೀಫ್ ಸಿಕ್ಕಿಲ್ಲ. ವಿಜಯ್ ಮಲ್ಯ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡುವುದರೊಂದಿಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸರಾಗವಾಗಿದೆ.
ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಮುಂಬೈ ಕೋರ್ಟ್ ಘೋಷಣೆ ಮಾಡಿದ ಅದರ ಪ್ರಕ್ರಿಯೆ ಭಾಗವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಆದರೆ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇವರ ಅರ್ಜಿಯನ್ನು ವಜಾ ಮಾಡುವುದರೊಂದಿಗೆ ಮಲ್ಯರನ್ನು ಸುಪ್ರೀಂ ಕೋರ್ಟ್ ಕೂಡ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದು ಮಾತ್ರಲ್ಲದೆ, ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳೋದಕ್ಕೂ ಅನುಮತಿ ನೀಡಿದಂತಾಗಿದೆ. ಒಂದೇ ಅರ್ಜಿಯ ನಿರ್ಧಾರದೊಂದಿಗೆ ಮಲ್ಯಗೆ ಎರಡು ದೊಡ್ಡ ಶಾಕ್ ಸಿಕ್ಕಿದೆ. ಒಂದೆಡೆ ಆರ್ಥಿಕ ಅಪರಾಧಿಯಾಗಿ ಅವರು ಉಳಿಯಲಿದ್ದರೆ, ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.