UDUPI : ಚೂರಿಯಿಂದ ಇರಿದು ಯುವಕನ ಬರ್ಬರ ಕೊಲೆ
Monday, February 6, 2023
ಕೋಲದಲ್ಲಿದ್ದ ಯುವಕನನ್ನು ಮಾತುಕತೆಗೆ ಅಂತ ಕರೆದು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉಡುಪಿಯ ಪಾಂಗಾಳದಲ್ಲಿ ನಡೆದಿದೆ. ಪುತ್ರ ಶರತ್ ವಿ. ಶೆಟ್ಟಿ ಕೊಲೆಯಾದ ಯುವಕ.
ಭೂ ವ್ಯವಹಾರ ನಡೆಸುತ್ತಿದ್ದ ಯುವಕ, ಕೊಲೆಗೂ ಮೊದಲು ಕೊಲೆಯಾದ ಸ್ಥಳದ ಮುಂಭಾಗದಲ್ಲಿ ನಡೆಯುತ್ತಿದ್ದ ದೈವ ನೇಮದಲ್ಲೂ ಕ್ರಿಯಾಶೀಲನಾಗಿ ಪಾಲ್ಗೊಂಡಿದ್ದ. ಕೋಲದಲ್ಲಿದ್ದ ಶರತ್‌ನನ್ನು ಮಾತುಕತೆಯ ನೆಪದಲ್ಲಿ ದೂರವಾಣಿ ಕರೆ ಮಾಡಿ ಕರೆಯಿಸಿಕೊಂಡ ಪರಿಚಿತರೇ ಹೆದ್ದಾರಿ ಬದಿ ಕೊಲೆ ಮಾಡಿದ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.