ಅನುಮತಿ ಇಲ್ಲದೆ ಡಿ ಕೆ ಶಿವಕುಮಾರ್ ಮಕ್ಕಳ ಪೊಟೋ ಬಳಕೆ- ಎರಡು YouTube ಚಾನೆಲ್ ವಿರುದ್ದ ಎಫ್ಐ ಆರ್
Sunday, February 5, 2023
ಬೆಂಗಳೂರು: ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಕ್ಕಳ ಫೋಟೋವನ್ನು ಬಳಸಿಕೊಂಡು ವಿಡಿಯೋ ಮಾಡಿದ ಆರೋಪದಡಿ ಎರಡು YouTube Chanel ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಡಿಕೆಶಿ ಕುಟುಂಬದ ಆಪ್ತರಾದ ಉಮೇಶ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು.
ಬಿ4ಯು ಕರ್ನಾಟಕ (B4uKannada) ಹಾಗೂ ಇಂಡಿಯಾ ರಿಪೋರ್ಟ್ (India report) ಹೆಸರಿನ ಎರಡು ಯೂಟ್ಯೂಬ್ ವಾಹಿನಿಗಳ ಮೇಲೆ ದೂರು ದಾಖಲಾಗಿದೆ.
'ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್' ಹಾಗೂ 'ಡಿಕೆಶಿ ಮಗ ಯಾರು..?', ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ? ಎಂಬ ಹೆಡ್ಡಿಂಗ್ ನೀಡಿ ವಿಡಿಯೋ ಸೃಷ್ಟಿಸಿ YOUTUBE ನಲ್ಲಿ
ಅಪ್‌ಲೋಡ್ ಮಾಡಿವೆ ಎಂದು ಉಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಅಲ್ಲದೇ, ಇವರ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಯಾಕೆ? ಎಂದು ಇಂಡಿಯಾ ರಿಪೋರ್ಟ್ ಸುದ್ದಿ ಮಾಡಿದೆ. ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್ ಎಂದು ಇಂಡಿಯಾ ರಿಪೋರ್ಟ್ ವರದಿ ಮಾಡಿದೆ. ಎರಡೂ YOUTUBE ಚಾನಲ್ ಗಳ ಲಿಂಕ್ ಸಮೇತವಾಗಿ ತಮ್ಮ ದೂರಿನ್ನು ನೀಡಿದ್ದರು. ಜೊತೆಗೆ ಈ ವಿಡಿಯೋಗಳಲ್ಲಿ ಅನುಮತಿ ಇಲ್ಲದೆ ಶಿವಕುಮಾರ್ ಅವರ ಮಗಳು ಮತ್ತು ಮಗನ ವಿಡಿಯೋ ಬಳಕೆ ಮಾಡಲಾಗಿದೆ ಎಂದು ದೂರು ನೀಡಿದ್ದರು.
ಹೀಗೆ ಅನುಮತಿ ಇಲ್ಲದೇ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ವಿಡಿಯೋವನ್ನು ಡಿಲೀಟ್ ಮಾಡಿಸಬೇಕೆಂದು ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಉಮೇಶ್ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ಈ ದೂರಿನನ್ವಯ 2 ಯೂಟ್ಯೂಬ್ ವಾಹಿನಿಗಳ ವಿರುದ್ಧ ಪೊಲೀಸರು FIR ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.