UDUPI : ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪಿಗೆ 10 ವರ್ಷ ಜೈಲು..!
Monday, February 6, 2023
ನಾಲ್ಕು ವರ್ಷಗಳ ಹಿಂದೆ ಕರಾಟೆ ತರಗತಿ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಹೆಜಮಾಡಿ ನಿವಾಸಿ ಉಮೇಶ್ ಬಂಗೇರ (48) ಆರೋಪಿ. ಈತ ಪಡುಬಿದ್ರಿಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು, ಕರಾಟೆ ತರಗತಿಗೆ ಬಂದಿದ್ದ 12 ವರ್ಷ ವಯಸ್ಸಿನ ಬಾಲಕಿ ಮೇಲೆ ತರಗತಿ ಮುಗಿದ ಬಳಿಕ ದೈಹಿಕ ದೌರ್ಜನ್ಯ ಎಸಗಿದ್ದ, ಇದನ್ನು ಯಾರಲ್ಲೂ ಹೇಳಬಾರದೆಂದು ಆತ ಬಾಲಕಿಗೆ ಬೆದರಿಕೆ ಹಾಕಿದ್ದ.
ಬಾಲಕಿ ತರಗತಿಗೆ ಹೋಗಲು ಒಪ್ಪದೆ ಅಳುತ್ತಿದ್ದಳು. ಆಗ ತಾಯಿ ವಿಚಾರಿಸಿದಾಗ ವಿಚಯ ಬೆಳಕಿಗೆ ಬಂದಿತ್ತು. ಅದರಂತೆ ತಾಯಿ ಆರೋಪಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದಂಡದ ಒಟ್ಟು 22 ಸಾವಿರ ರೂ. ಮೊತ್ತದಲ್ಲಿ 17,000 ರೂ. ನೊಂದ ಬಾಲಕಿಗೆ ಪರಿಹಾರವಾಗಿ ಮತ್ತು 5 ಸಾವಿರ ರೂ. ಸರಕಾರಕ್ಕೆ ಪಾವತಿಸಬೇಕು. ಅಲ್ಲದೆ ಸರಕಾರ ನೊಂದ ಬಾಲಕಿಗೆ ಒಂದು ಲ.ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.