
UDUPI : ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದ ನಟಿ ಶುಭಾ ಪೂಂಜಾ
Saturday, February 25, 2023
ಸಿನಿಮಾ ರಂಗದ ಸೆಲೆಬ್ರಿಟಿಗಳಿಗೆ ತನ್ನೂರಿನ ಹಬ್ಬಗಳಲ್ಲಿ ಭಾಗವಹಿಸಬೇಕು, ಜಾತ್ರೆಯಲ್ಲಿ ಸುತ್ತಾಡಬೇಕು ಅನ್ನೋ ಆಸೆ ಸಹಜ. ಆದ್ರೆ ಕೆಲಸದ ಒತ್ತಡ ಹಾಗೂ ನಾನಾ ಕಾರಣದಿಂದ ಅದು ಕೆಲವು ಬಾರಿ ಸಾಧ್ಯವಾಗುದಿಲ್ಲ. ಆದ್ರೆ ನಟಿ ಶುಭಾ ಪೂಂಜಾ ತನ್ನೂರಿನ ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಕೈಗಳಿಗೆ ಗಾಜಿನ ಬಳೆ ತೊಟ್ಟು ಸಂಭ್ರಮ ಪಟ್ಟಿದ್ದಾರೆ.
ಮೂಲತ ಉಡುಪಿ ಜಿಲ್ಲೆಯವರಾದ ಶುಭಾ ಪೂಂಜಾ, ಉಡುಪಿಯ ಶಿರ್ವ ಸಮೀಪದ ಪಿಲಾರುಕಾನ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಜಾತ್ರೆಗೆ ಆಗಮಿಸಿ, ಊರವರ ಜೊತೆಗೆ ಸಾಮಾನ್ಯರಂತೆ ಸುತ್ತಾಡಿದ್ದಾರೆ.
ಜಾತ್ರೆಯ ಸಂತೆಗೆ ಬಂದಿದ್ದ ಮಹಿಳೆಯಿಂದ ಹಸಿರು ಗಾಜಿನ ಬಳೆ ತೊಟ್ಟುಕೊಂಡು ಸಂಭ್ರಮಪಟ್ಟರು.. ಮಕ್ಕಳಿಗೆ ಐಸ್ ಕ್ರಿಂ ತೆಗೆದುಕೊಟ್ಟು, ತಾನು ಸೆಲೆಬ್ರಿಟಿ ನಟಿ ಅಂತ ಮೆರೆಯದೇ ಊರವರೊಂದಿಗೆ ಹರಟೆ ಹೊಡೆದರು. ಸೆಲ್ಪಿ ಅಂತ ಹತ್ತಿರ ಬಂದ ಅಭಿಮಾನಿಗಳಿಗೆ ನಗುತಾ ಪೋಸ್ ನೀಡಿದ್ದರು.