ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಹುತಾತ್ಮರಾದ ಮೂವರು ಸಿಆರ್‌ಪಿಎಫ್ ಯೋಧರು
Saturday, February 25, 2023
ಸುಕ್ಕ: ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ನಕ್ಸಲರ ಗುಂಡಿಗೆ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿರುವ ಘಟನೆ ಸುಕ್ಕ ಜಿಲ್ಲೆಯಲ್ಲಿ ನಡೆದಿದೆ.
ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ಮೂವರು ಡಿಆರ್‌ಜಿ ಅಧಿಕಾರಿಗಳು ಹತರಾಗಿದ್ದಾರೆ. ಇವರಲ್ಲಿ ALI ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬಲ್ ಕುಂಜಮ್ ಜೋಗ ಮತ್ತು ಸೈನಿಕ ವನಜಮ್ ಭೀಮ ಸೇರಿದ್ದಾರೆ. ಸುಷ್ಮಾ ಜಿಲ್ಲೆಯ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಗುಂಡಿನ ಕಾಳಗ ಇನ್ನೂ ಮುಂದುವರೆದಿದೆ ಎನ್ನಲಾಗಿದೆ.