ಪವರ್ ಮಿನಿಸ್ಟರ್ ಗೆ ಸದನದಲ್ಲಿ ಪವರ್ ಶಾಕ್!
Friday, February 24, 2023
ಬೆಂಗಳೂರು : ಪವರ್ ಮನಿಸ್ಟರ್ ವಿ ಸುನಿಲ್ ಕುಮಾರ್ ಅವರಿಗೆ ಇಂದು ವಿಧಾನಸೌಧದಲ್ಲಿ ಮಸೂದೆ ಮಂಡನೆ ಸಂದರ್ಭದಲ್ಲಿ ಮೈಕ್ ಆನ್ ಮಾಡುವಾಗ ಪವರ್ ಶಾಕ್ ತಗುಲಿದ ಪ್ರಸಂಗ ನಡೆಯಿತು.
ಸಚಿವ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಸೂದೆ ಮಂಡಿಸಲು ಮುಂದಾದರು. ಇನ್ನೇನು ಡೆಸ್ಕ್ ನ ಮೈಕ್ ಸ್ವಿಚ್ ಆನ್ ಮಾಡುವಾಗ ಏಕಾಏಕಿ ಸಣ್ಣ ಪ್ರಮಾಣದ ವಿದ್ಯುತ್ ಶಾಕ್ ಹೊಡೆದಿದೆ, ಇದರಿಂದ ಸಚಿವ ಸುನಿಲ್ ಕುಮಾರ್ ಒಂದು ಕ್ಷಣ ತಬ್ಬಿಬ್ಬಾದ ಪ್ರಸಂಗ ನಡೆಯಿತು. ತಕ್ಷಣವೇ ಸುಧಾರಿಸಿಕೊಂಡ ಸುನಿಲ್ ಅವರ ಬಿಲ್ ಪ್ರತಿ ಓದಲು ಆರಂಭಿಸಿದಾಗ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆದಲ್ವಾ..? ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸದನವು ನಗೆಗಡಲಲ್ಲಿ ತೇಲಿತು .