UDUPI : ಪುಂಗನೂರು ಗೋವುಗಳನ್ನು ಮುದ್ದಾಡಿದ ನಟ ರಕ್ಷಿತ್ ಶೆಟ್ಟಿ
Wednesday, February 22, 2023
ಚಾರ್ಲಿ ಸಿನಿಮಾದಲ್ಲಿ ಶ್ವಾನ ಪ್ರೇಮ ಮೆರೆದಿದ್ದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ, ತಮ್ಮ ಹುಟ್ಟೂರು ಉಡುಪಿಯ ಶಿವಪಾಡಿಯಲ್ಲಿ ಅಳಿವಿನಂಚಿನ ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ಸಂತಸಪಟ್ಟಿದ್ದಾರೆ.
ಉಡುಪಿಯ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 05ರವರೆಗೆ ‘ಅತಿರುದ್ರ ಮಹಾಯಾಗ’ ನಡೆಯಲಿದೆ. ಸುಮಾರು ೪ ಕೋಟಿ ವೆಚ್ಚದಲ್ಲಿ ನಡೆಯುವ ಯಾಗಕ್ಕಾಗಿ ಭರದ ಸಿದ್ದತೆ ನಡೆಯುತ್ತಿದೆ. ಈ ಸಂದರ್ಭ ನಟ ರಶಿತ್ ಶೆಟ್ಟಿ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇಗುಲದಲ್ಲಿ ನಡೆಯುತ್ತಿರುವ ಯಾಗದ ಸಿದ್ದತೆ ತಯಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಗೋ ಪ್ರೇಮ ಮೆರೆದರು. ಪುಂಗನೂರು ತಳಿ ಅಳಿವಿನಂಚಿನ ಗೋ ತಳಿಯಾಗಿದ್ದು, ಶಿವಪಾಡಿಯ ಶಿವ ಭಕ್ತರಿಗೆ ಪುಂಗನೂರು ತಳಿಯನ್ನು ಪರಿಚಯಿಸುವ ಸದುದ್ದೇಶದಿಂದ ಪುಂಗನೂರು ಗೋವುಗಳನ್ನು ತರಿಸಲಾಗಿದೆ.