-->

 ಮುತಾಲಿಕ್‌ಗೆ ಉದ್ಯಮಿಯ ಹಿತರಕ್ಷಣೆಯೇ ಮುಖ್ಯವಾಯಿತು

ಮುತಾಲಿಕ್‌ಗೆ ಉದ್ಯಮಿಯ ಹಿತರಕ್ಷಣೆಯೇ ಮುಖ್ಯವಾಯಿತು

ಕಾರ್ಕಳ : ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್
ಮುತಾಲಿಕ್ ಅವರು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಅವರ ಜತೆಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿದ್ದ
ನಮ್ಮಂಥವರಿಗೆ ಬೇಸರವಾಗಿದೆ ಎಂದು ಶ್ರೀರಾಮಸೇನೆ

ರಾಜ್ಯ ಉಪಾಧ್ಯಕ್ಷ ಮಹೇಶ್ ಕಟ್ಟಿನಮನೆ, ಜಿಲ್ಲಾ ಗೌರವಾಧ್ಯಕ್ಷರು ಚಂದ್ರಕಾಂತ್ ಶೆಟ್ಟಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ್ ಭಟ್ ಹೇಳಿದ್ದಾರೆ. ನಿಜವಾದ ಹಿಂದುತ್ವದಲ್ಲಿ ತೊಡಗಿಸಿಕೊಂಡವರಿಗೆ ಸಂಘಟನೆಯೇ ಮೊದಲ ಆದ್ಯತೆ, ರಾಜಕೀಯ ಎರಡನೇ ಆದ್ಯತೆ ಎಂದು ಬಲವಾಗಿ ನಂಬಿಕೊಂಡವರು ನಾವು. ಈ ಕಾರಣದಿಂದಾಗಿಯೇ ನೀವು ಚುನಾವಣಾ ರಾಜಕಾರಣದ ಇಚ್ಚೆ ವ್ಯಕ್ತಪಡಿಸಿದಾಗ ರಾಜಕೀಯ ಬೇಡ ಎಂಬ ಸಲಹೆ ನೀಡಿದ್ದೆವು. ಆದರೆ ಈ ಸಲಹೆಯನ್ನು ಸಹಿಸದ ನೀವು ಕಳೆದ 25 ವರ್ಷದಿಂದ ನಿಮ್ಮ ಜತೆ ಗುರುತಿಸಿಕೊಂಡಿದ್ದ, ಶ್ರೀ ರಾಮಸೇನೆಯನ್ನು ಕಟ್ಟಲು ಹೆಗಲುಕೊಟ್ಟ ನಮ್ಮನ್ನು ಈಗ ವಜಾಗೊಳಿಸಿದ್ದೀರಿ.

ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ನಿಮ್ಮ ಜತೆ ಇದ್ದ ನಮ್ಮಂಥವರನ್ನು ರಾಜಕಾರಣ ಬೇಡ ಎಂದು ಸಲಹೆ ಕೊಟ್ಟ ಒಂದೇ ಕಾರಣಕ್ಕೆ ವಜಾಗೊಳಿಸುತ್ತೀರಿ ಎಂದಾದರೆ ಪ್ರಮೋದ್ ಮುತಾಲಿಕ್ ಅವರ ಆಯ್ಕೆ ಹಿಂದುತ್ವವಲ್ಲ, ಸಂಘಟನೆಯಲ್ಲ, ಕಾರ್ಯಕರ್ತರೂ ಅಲ್ಲ ಕೇವಲ ರಾಜಕೀಯ ಆಕಾಂಕ್ಷೆ ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ನಿಮ್ಮನ್ನೇ ನಂಬಿಕೊಂಡು ಸಂಘಟನೆಗೆ ಬಂದ ನಮ್ಮಂತ ಕಾರ್ಯಕರ್ತರ ಮೇಲೆ
ಒಂದು ಪಾಠವಾಗುತ್ತದೆ ಎಂದು ನಾವ್ಯಾರು ಭಾವಿಸಿರಲಿಲ್ಲ.

ಅದೆಷ್ಟೋ ಜನರಿಗೆ ನಿಮ್ಮ ಈ ನಡೆ ಇಷ್ಟು ವರ್ಷದ ಮೇಲೆ ಒಂದು ಪಾಠವಾಗುತ್ತದೆ ಎಂದು ನಾವ್ಯಾರು ಭಾವಿಸಿರಲಿಲ್ಲ. ಅಂತಿಮವಾಗಿಯಾದರೂ ಸತ್ಯ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಯಾರೋ ಒಬ್ಬ ಉದ್ಯಮಿಯ ಮಾತಿಗೆ ಬೆಲೆಕೊಟ್ಟು ನಿಮ್ಮ ಜತೆ ಇದ್ದ ಕಾರ್ಯಕರ್ತರನ್ನೇ ವಜಾ ಮಾಡುತ್ತೀರಿ ಎಂದಾದರೆ ನಿಮಗೆ ಕಾರ್ಯಕರ್ತರು ಮುಖ್ಯವಲ್ಲ, ಉದ್ಯಮಿ ಹಾಗೂ ಅವರ ಹಿತಾಸಕ್ತಿ ರಕ್ಷಣೆ ಮುಖ್ಯ ಎಂದಾಯಿತಲ್ಲವೇ? ನೀವು ನಮ್ಮನ್ನು ಸಂಘಟನೆಯಿಂದ ವಜಾಗೊಳಿಸಿದ ಮಾತ್ರಕ್ಕೆ ನಾವ್ಯಾರು ಹಿಂದುತ್ವದಿಂದ ದೂರ ಸರಿಯುವುದಿಲ್ಲ. ಈ ಕ್ಷಣಕ್ಕೂ ನಮ್ಮ ಮೊದಲ ಆದ್ಯತೆ ಹಿಂದುತ್ವ, ಎರಡನೇ ಆದ್ಯತೆ ರಾಜಕಾರಣ. ಆದರೆ ನಿಮ್ಮ ಆದ್ಯತೆ ಏನು? ಎಂಬುದನ್ನು ಮರುಚಿಂತನೆ ಮಾಡುವುದಕ್ಕೆ ಇದು ಸಕಾಲ. ರಾಜಕೀಯ ಆಕಾಂಕ್ಷೆಗಾಗಿ ನಿಷ್ಠಾವಂತ ಕಾರ್ಯಕರ್ತರನ್ನು ದೂರ ಮಾಡಿರುವ ನೀವು ಒಂದು ರಾಜಕೀಯ ಸಿದ್ಧಾಂತದ ಅಡಿಯಲ್ಲಿ ಖಂಡಿತ ಸಫಲರಾಗುವುದಿಲ್ಲ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಸಂಘಟನೆ ಮೊದಲು ರಾಜಕೀಯ ನಂತರ ಎಂಬುದನ್ನು ನಮ್ಮಂಥವರಿಗೆ ಹೇಳಿಕೊಟ್ಟ ನೀವು ಕೊನೆಗೆ ಕೊಟ್ಟ ಕುದುರೆ ಏರಲಾರದ ಸ್ಥಿತಿ ತಲುಪಿದ್ದೀರೆಂದು ತಿಳಿಸಬಯಸುತ್ತೇವೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99