
UDUPI : ಹೈನುಗಾರಿಕೆಯಲ್ಲಿ ನಷ್ಟ : ಯುವಕ ಆತ್ಮಹತ್ಯೆ
ಹೈನುಗಾರಿಕೆಯಲ್ಲಿ ನಷ್ಟ ಹಿನ್ನಲೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಮರ್ಣೆ ಗ್ರಾಮದ ಕುರ್ಪಾಡಿ ಎಂಬಲ್ಲಿ ನಡೆದಿದೆ.
ಕುರ್ಪಾಡಿ ನಿವಾಸಿ ಶ್ರೀನಿವಾಸ ಪೂಜಾರಿ(25) ಆತ್ಮಹತ್ಯೆ ಮಾಡಿಕೊಂಡ ಯುವಕ. ವೆಲ್ಡಿಂಗ್ ವರ್ಕ್‌ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ ಪೂಜಾರಿ, ಅದರ ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದರು. ಹೈನುಗಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಚಿಂತೆಯಲ್ಲಿ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.