UDUPI : ಮೀನುಗಾರರ ಬಲೆಗೆ ಸಿಕ್ಕಿತು, 2 ಕ್ವಿಂಟಾಲ್‌ನ ಕಟ್ಟೆ ಕೊಂಬು ಮೀನು..!
Monday, February 13, 2023
ಉಡುಪಿಯ ಮಲ್ಪೆಯ ಬೋಟ್ ಒಂದರಲ್ಲಿ ಮೀನುಗಾರಿಕೆಗೆ ಹೋದ ತಂಡಕ್ಕೆ ದೈತ್ಯ ಗಾತ್ರದ ಮೀನೊಂದು ಸಿಕ್ಕಿದೆ.
ಶಾಂಭವಿ ಹೆಸರಿನ ಬೋಟಿನವರಿಗೆ, ಸುಮಾರು ಎರಡು ಕ್ವಿಂಟಾಲ್ ನಷ್ಟು ತೂಕದ ಈ ಮೀನು ಸಿಕ್ಕಿದ್ದು, ಈ ಜಾತಿಯ ಸಣ್ಣ ಮೀನಿಗೆ ಇರುವಷ್ಟು ರೇಟ್ ದೊಡ್ಡ ಮೀನಿಗೆ ಇಲ್ಲ. ಆದರೆ ಈ ದೈತ್ಯ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡಿದ್ದು ಮಲ್ಪೆಯಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು.
ಈ ಮೀನಿಗೆ ಸ್ಥಳೀಯವಾಗಿ ಕಟ್ಟೆ ಕೊಂಬು ಮೀನು ಎಂದು ಕರೆಯುತ್ತಾರೆ. ಕೆಜಿಗೆ ಸುಮಾರು 250 ರೂ ನಷ್ಟು ಬೆಲೆ ಇದೆ ಅಂತಾರೆ ಸ್ಥಳೀಯರು. ಸದ್ಯ ಕ್ರೇನ್ ಮೂಲಕ ಬೋಟ್ ನಿಂದ ಹೊರತೆಗೆದ ಈ ಮೀನಿನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.