ಕೊರಗಜ್ಜನ ಕೋಲಕ್ಕಾಗಿ ಅಮಿತ್ ಶಾ ರೋಡ್‌ಶೋ ರದ್ದುಗೊಳಿಸಿದ ಬಿಜೆಪಿ
Thursday, February 9, 2023
ಜಿಲ್ಲೆಯಾದ್ಯಂತ ಈಗಾಗಲೇ ಸಂಚಲನ ಸೃಷ್ಟಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾಯ ಅಮಿತ್ ಶಾ ರವರ ಫೆಬ್ರವರಿ 11 ರ ಮಂಗಳೂರು ಭೇಟಿ ಹಿನ್ನಲೆಯಲ್ಲಿ ಅವರ ಈ ಪ್ರವಾಸವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೃಹತ್ ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದ ಯಶಸ್ಸಿಗೆ ಸಾಕಾಷ್ಟು ತಯಾರಿಯನ್ನೂ ನಡೆಸಿತ್ತು. ಆದರೆ ರೋಡ್ ಷೋ ಸಾಗುವ ಪದವಿನಂಗಡಿಯಲ್ಲಿ ಅಂದಿನ ದಿನವೇ ಕಾರಣಿಕದ ಕೊರಗಜ್ಜನ ಕೋಲ ಇರುವ ಕಾರಣ ಪಕ್ಷದ ನಿಗದಿತ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡುವ ತುಳುನಾಡಿನಲ್ಲಿ ದೈವ ಭಕ್ತರಿಗೆ ಪಕ್ಷದ ಕಾರ್ಯಕ್ರಮದಿಂದಾಗಿ ಕಿಂಚಿತ್ತೂ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಪಕ್ಷ ತೆಗೆದುಕೊಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ.