ಮದುವೆಗೆ ಹೋಗುತ್ತಿದ್ದವರು ಮಸಣಸೇರಿದರು.!- ಟ್ರಕ್, ಕಾರು ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಸಾವು
Thursday, February 9, 2023
ಜೈಪುರ: ಟ್ರಕ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದ ಬನಸ್ವಾರದ ಹೆಜಮಾಲ್ ರಸ್ತೆ ಬಳಿ ಗುರುವಾರ ಸಂಭವಿಸಿದೆ.
ಮೃತರು ಗುಜರಾತ್‌ನ ಸುಖಸರ್ ನಿವಾಸಿಗಳು. ಮೃತ ಮೂವರೂ ಪುರುಷರಾಗಿದ್ದು, ಬನಸ್ವಾರದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಸ್ಥಾನಕ್ಕೆ ಬಂದಿದ್ದರು. ದಾರಿಯಲ್ಲಿ ಹೋಗುತ್ತಿದ್ದಾಗ ಅವರ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ.