
ಮಗಳನ್ನು ನೋಡಲು ಬಂದ ತಂದೆ ಹೃದಯಾಘಾತದಿಂದ ಸಾವು
Tuesday, February 7, 2023
ಮೂಡುಬಿದಿರೆಯ ವಿದ್ಯಾ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ನೋಡಿ ಮಾತನಾಡಿಸಿ ವಾಪಸು ಊರಿಗೆ ಹೊರಟ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೂಡುಬಿದಿರೆಯಲ್ಲಿ ಸಂಭವಿಸಿದೆ.
ಬೆಳಗಾವಿ ಮೂಲದ ವ್ಯಕ್ತಿ ಮೃತಪಟ್ಟವರು.
ಮೂಡುಬಿದಿರೆಯಲ್ಲಿ ಕಲಿಯುತ್ತಿರುವ ತನ್ನ ಮುದ್ದಿನ ಮಗಳನ್ನು ಕಂಡು ಮಾತನಾಡಿಸಿ ವಾಪಾಸು ಊರಿಗೆ ಹೋಗಲು ಸ್ಟ್ಯಾಂಡಿನತ್ತ ಹೋಗಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ಕುಸಿದು ಬಿದ್ದವರನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಸಾಗಿ ಸಿದರಾರೂ ಪ್ರಯೋಜನವಾಗಲಿಲ್ಲ. ಮಗಳನ್ನು ನೋಡುವ ತವಕದಿಂದ ಬಂದಿದ್ದ ತಂದೆ ವಾಪಾಸು ಮೃತದೇಹವಾಗಿಯೇ ಹೋದ ದುರಂತ ಘಟನೆಯಿದು.
ಇದೇ ರೀತಿಯ ಇನ್ನೊಂದು ಘಟನೆ ಇತ್ತೀಚೆಗೆ ಮೂಡುಬಿದಿರೆಯ ಶಿಕ್ಷಣ ಇಲಾಖೆಯ ಕಚೇರಿ ಬಳಿ ಸಂಭವಿಸಿದೆ. ಅಲಂಗಾರಿನ ಮಹಿಳೆಯೊಬ್ಬರು ತನ್ನ ಪರಿಚಯದವರಲ್ಲಿ ಮಾತನಾಡಿಸಲೆಂದು ತನ್ನ ವಾಹನವನ್ನು ನಿಲ್ಲಿಸಿ ಆ ವ್ಯಕ್ತಿಯ ಬಳಿ ಹೋಗುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊ ಯ್ಯಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.