UDUPI : ಜೆಸಿಬಿಯಲ್ಲಿ ಹಾಲ್‌ಗೆ ಎಂಟ್ರಿ ಕೊಟ್ಟ ವದುವರ ಜೋಡಿ..!
Tuesday, February 7, 2023
ಮದುವೆ ಸಂಭ್ರಮ ಅಂದ್ರೆ ಖುಷಿ ಸಹಜ. ಮದುವೆ ದಿನ, ಮದುವೆ ಮಂಟಪಕ್ಕೆ ನವ ಜೋಡಿ ವಿಭಿನ್ನವಾಗಿ ಆಗಮಿಸಿ ಬಂದ ಅತಿಥಿಗಳ ಗಮನ ಸೆಳೆಯುತ್ತಾರೆ. ಅದರಂತೆ, ಉಡುಪಿಯ ನಾರಾಯಣ ಸಭಾ ಭವನ ವಿಶ್ವನಾಥ ಕ್ಷೇತ್ರ ಕಟಪಾಡಿ ಇಲ್ಲಿ ನಡೆದ ಮದುವೆಯಲ್ಲಿ, ನವ ಜೋಡಿ ರಾಜೇಶ್ ಹಾಗೂ ಗೀತಾ ಜೆಸಿಬಿಯಲ್ಲಿ ಎಂಟ್ರಿ ಕೊಟ್ಟು ನೆರೆದಿದ್ದವರ ಗಮನ ಸೆಳೆದಿದ್ದರು.
ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿರುವ ರಾಜೇಶ್, ತನ್ನ ಮದುವೆಯಲ್ಲಿ ಏನಾದರೊಂದು ಹೊಸತನ ಇರಬೇಕು ಅಂತ ವಿಶಿಷ್ಟ ಎಂಟ್ರಿಯ ಪ್ಲಾನ್ ಹಾಕಿಕೊಂಡು, ಜೆಸಿಬಿಯಲ್ಲಿ ಗಡದ್ದಾಗಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ರಾಜೇಶ್ ಡಿಪರೆಂಟ್ ಎಂಟ್ರಿ ಐಡಿಯಾಗೆ ಗೀತಾ ಕೂಡ ಸಹಕಾರ ನೀಡಿದ್ದಾರೆ. ನವ ಜೋಡಿ ಜೆಸಿಬಿಯಲ್ಲಿ ಆಗಮಿಸುವ ವಿಡಿಯೋ ಸದ್ಯ ಕರಾವಳಿಯಲ್ಲಿ ಬಾರೀ ವೈರಲ್ ಆಗಿದೆ..