UDUPI ; ಪಾಂಗಾಳ ಶರತ್ ಶೆಟ್ಟಿ ಮರ್ಡರ್ ಕೇಸ್ ; ಸಿಸಿ ಟಿವಿ ವಿಡಿಯೋ ಲಭ್ಯ
Tuesday, February 7, 2023
ಉಡುಪಿಯ ಪಾಂಗಾಳದಲ್ಲಿ ಭಾನುವಾರ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಕೈಯಲ್ಲಿ ಲಾಂಗ್ ಹಿಡಿದು ಬೈಕ್ ನಲ್ಲಿ ತೆರಳುತ್ತಿರುವ ಸಿಸಿ ಟಿವಿ ಫೂಟೇಜ್ ಲಭ್ಯವಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಉದ್ಯಮಿ ಆಗಿದ್ದ ಶರತ್ ಶೆಟ್ಟಿಯವರನ್ನು ಪಾಂಗಾಳದಲ್ಲಿ ನೇಮೋತ್ಸವದಲ್ಲಿದ್ದಾಗ ಫೋನ್ ಕರೆ ಮಾಡಿ ಕರೆಸಿಕೊಳ್ಳಲಾಗಿತ್ತು.
ನಂತರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ಸ್ಥಳದ ಅಕ್ಕಪಕ್ಕದಲ್ಲಿರುವ ಸಿಸಿ ಟಿವಿ ಪೂಟೇಜ್ ನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಸದ್ಯ ಸಿಸಿ ಟಿವಿಯ ವಿಡಿಯೋ ಲಭ್ಯವಾಗಿದ್ದು, ಮೂವರು ದುಷ್ಕರ್ಮಿಗಳು ಲಾಂಗ್ ಹಿಡಿದು ಹೋಗುವ ವಿಡಿಯೋ ಇದಾಗಿದೆ.