-->
   ಚಲಿಸುತ್ತಿದ್ದ ಕಾರಿಗೆ ಬೆಂಕಿ: ಜೀವದ ಹಂಗನ್ನು ತೊರೆದು ಐವರ ಜೀವ ರಕ್ಷಿಸಿದ ಪೊಲೀಸ್ ತಂಡ

ಚಲಿಸುತ್ತಿದ್ದ ಕಾರಿಗೆ ಬೆಂಕಿ: ಜೀವದ ಹಂಗನ್ನು ತೊರೆದು ಐವರ ಜೀವ ರಕ್ಷಿಸಿದ ಪೊಲೀಸ್ ತಂಡ

ರಾಂಚಿ : ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವಾಗ ಜೀವದ ಹಂಗನ್ನೂ ತೊರೆದು ಪೊಲೀಸರ ತಂಡ ಐವರನ್ನು ರಕ್ಷಿಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ಕಾರಿನಲ್ಲಿ ಮಹಿಳೆ, ಮಕ್ಕಳು ಸೇರಿ ಐದು ಮಂದಿ ಚಲಿಸುತ್ತಿದ್ದರು, ಈ ಘಟನೆ ರಾಂಚಿಯ ಐಟಿಬಿಪಿ ಬಳಿಯ ರಿಂಗ್ ರೋಡ್‌ನಲ್ಲಿ ನಡೆದಿದೆ. ರಾಂಚಿಯ ನಿವಾಸಿ ದಾಮೋದರ್ ಗೋಪ್ ಅವರು ತಮ್ಮ ಕುಟುಂಬದೊಂದಿಗೆ ರಾಂಚಿಯ ಬೋರಿಯಾಕ್ಕೆ ಹೋಗುತ್ತಿದ್ದರು.

ಇದ್ದಕ್ಕಿಂದ್ದಂತೆ ಕಾರು ಬ್ರೇಕ್ ಫೇಲ್ ಆಗಿತ್ತು ತಕ್ಷಣ ಕಾರಿನ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ದಾಮೋದರ್ ಗೋಪ್ ಹೇಗಾದರೂ ಮಾಡಿ ತನ್ನ ಕಾರನ್ನು ನಿಲ್ಲಿಸಿದರು. ಈ ವೇಳೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಬಳಿಕ ಸ್ಥಳೀಯರು ಎಲ್ಲಾ ಸವಾರರನ್ನು ಹೊರ ತೆಗೆಯಲು ಪ್ರಯತ್ನಿಸಿದರು. ಇದೇ ವೇಳೆ ರಾಂಚಿಯ ಎಸ್‌ಎಸ್‌ಪಿ ಕಿಶೋರ್ ಕೌಶಲ್ ಅವರ ವಿಶೇಷ ತಂಡ ಅದೇ ಮಾರ್ಗವಾಗಿ ಸಾಗುತ್ತಿತ್ತು.

ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ವಿಶೇಷ ತಂಡದ ಪ್ರವೀಣ್ ತಿವಾರಿ, ಕೃಷ್ಣ, ವಿನಯ್ ಕಾರಿನ ಗಾಜು ಒಡೆದು ಪ್ರಾಣವನ್ನೇ ಪಣಕ್ಕಿಟ್ಟು ಇಡೀ ಕುಟುಂಬದವರನ್ನು ಕಾರಿನಿಂದ ಸುರಕ್ಷಿತವಾಗಿ ಕೆಳಕ್ಕಿಳಿಸಿದ್ದಾರೆ. ಅವರನ್ನು ಹೊರ ತೆಗೆದು 5 ನಿಮಿಷಗಳಲ್ಲಿ ಕಾರು ಸುಟ್ಟು ಬೂದಿಯಾಯಿತು.

Ads on article

Advertise in articles 1

advertising articles 2

Advertise under the article