ಅತ್ಯಾಚಾರ ಎಸಗಲು ಬಂದಿದ್ದ ಕಿರಾತಕನ ತುಟಿ ಕಚ್ಚಿ ಧೈರ್ಯದಿಂದ ಬಚಾವ್ ಆದ ಯುವತಿ
Monday, February 6, 2023
ಲಕ್ಕೋ ಯುವತಿಯೊಬ್ಬಳು ತನ್ನನ್ನು ಅತ್ಯಾಚಾರ ಮಾಡಲು ಯತ್ನಿಸಿದ ಪುರುಷನ ಮೇಲೆ ಧೈರ್ಯದಿಂದ ಹೋರಾಟ ಮಾಡಿ ಬಚಾವ್ ಆಗಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಿಡಿದು, ಅತ್ಯಾಚಾರ ಮಾಡಲು ಹೋದ ಕಿರಾತಕ ಬಲವಂತವಾಗಿ ಚುಂಬಿಸಲು ಹೋಗಿದ್ದಾನೆ. ಈ ವೇಳೆ ಆಕೆ ವ್ಯಕ್ತಿಯ ತುಟಿಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಕತ್ತರಿಸಿ ಹಾಕಿದ್ದಾಳೆ. ಇದರಿಂದ ಯುವಕ ತುಟಿಯ ಕೆಳಭಾಗದ ಭಾಗವೇ ಇಲ್ಲದಂತಾಗಿದ್ದು, ಸಂಪೂರ್ಣ ಬಾಯಿ ರಕ್ತಮಯವಾಗಿತ್ತು.
ಯುವತಿಯ ಕೂಗಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ತುಟಿಯ ತುಂಡನ್ನು ಪ್ಯಾಕೆಟ್‌ನಲ್ಲಿ ಸೀಲ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇನ್ನೊಂದೆಡೆ ಮಹಿಳೆಯು, ಲಾವಡ್ ಗ್ರಾಮದ ಮೋಹಿತ್ ಸೈನಿ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಕುರಿತಾಗಿ ಎಫ್‌ಐಆರ್ ದಾಖಲು ಮಾಡಿದ್ದಾಳೆ.