32 ಗ್ರಾಮಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ ಅಮೆರಿಕನ್ ಸಿಂಗರ್, ಡ್ಯಾನ್ಸರ್ ಬೆಯೋನ್ಸ್
Monday, February 6, 2023
ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ 2023 ಪ್ರಕಟವಾಗಿದೆ. ಅತೀ ಹೆಚ್ಚು ಅಂದರೆ 32 ಗ್ರಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಅದ್ಧೂರಿ ಗ್ರಾಮಿ ಪ್ರಶಸ್ತಿ ಸಮಾರಂಭದಲ್ಲಿ ಜಗತ್ತಿನ ಅನೇಕ ಗಣ್ಯರು ಭಾಗಿಯಾಗಿದ್ದರು. ಬೆಯೋನ್ಸ್ ಅವಾರ್ಡ್ ಎತ್ತಿ ಹಿಡಿಯುವ ಮೂಲಕ ದಾಖಲೆ ಬರೆದರು.
ಅತ್ಯುತ್ತಮ ಡಾನ್ಸ್ ಹಾಗೂ ಎಲೆಕ್ಟ್ರಾನಿಕ್ ಮ್ಯೂಸಿಕ್ ಆಲ್ಬಂಗಾಗಿ ಬೆಯೋನ್ಸ್ ಗ್ರಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ 31 ಪ್ರಶಸ್ತಿಗಳನ್ನು ಗೆದ್ದಿದ್ದ ಕ್ಲಾಸಿಕಲ್ ಸಂಗೀತಗಾರ ದಿವಂಗತ ಜಾರ್ಜ್ ಸೊಲ್ಟಿ ದಾಖಲೆಯನ್ನು ಬ್ರೇಕ್ ಮಾಡಿದರು.
ಕ್ಲೀನ್ ಬೇ ಎಂದೇ ಖ್ಯಾತಿ ಗಳಿಸಿರುವ ಬೆಯೋನ್ಸ್ ಮಿರ ಮಿರ ಮಿಂಚುತ್ತಿದ್ದ ಗೌನ ಧರಿಸಿದ್ದ ಮತೃ ಕನೈಯಾಗಿ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. 41 ವರ್ಷದ ಬೆಯೋನ್ಸ್ ಈ ಸಾಧನೆಗೆ ಅಭಿಮಾನಿಗಳಿಂದ ಅಭಿನಂದನೆಯಗಳ ಮಹಾಪೂರ ಹರಿದು ಬರುತ್ತಿದೆ.
ನನ್ನ ತಂದೆ, ನನ್ನ ತಾಯಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಪತಿ, ನನ್ನ ಸುಂದರ ಮೂವರು ಮಕ್ಕಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಬೆಯೋನ್ಸ್ ಪ್ರಶಸ್ತಿ ಗೆದ್ದ ಬಳಿಕ ತನ್ನ ಕುಟುಂಬಕ್ಕೆ ಪ್ರೀತಿ ಪಾತ್ರರಿಗೆ ಧನ್ಯವಾದ ತಿಳಿದರು.
ರೆನೆಸಾನ್ಸ್ ಆಲ್ಬಂ ಬೆಯೋನ್ಸ್ 7ನೇ ಸೋಲೋ ಆಲ್ಬಂ ಆಗಿದೆ. ಬಿಲ್‌ಬೋರ್ಡ್‌ನ ಉತ್ತಮ ಹಾಡುಗಳ ಪಟ್ಟಿಯಲ್ಲಿ ಬೆಯೋನ್ಸ್‌ಗೆ ಪ್ರಥಮ ಸ್ಥಾನವನ್ನು ನೀಡಿತ್ತು.