
ಕಾರ್ಕಳದ ಬಹುಮಹಡಿ ಕಟ್ಟಡವನ್ನು ಏರಿ ಸಾಹಸ ಪ್ರದರ್ಶಿಸಿದ ಕೋತಿರಾಜ್
ಕಾರ್ಕಳ: ಯಾರ ಸಹಾಯವೂ ಇಲ್ಲದೆ, ಯಾವುದೇ ಆಸರೆಯಿಲ್ಲದೆ ಅತ್ಯಂತ ಎತ್ತರದ ಬಂಡೆಗಳನ್ನು ಕಟ್ಟಡಗಳನ್ನು ಏರಿ ಚಿತ್ರದುರ್ಗದ ಕೋಟೆ ,ಹಿಮಾಲಯ, ಜೋಗದ ಬೆಟ್ಟ ಹತ್ತುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿರುವ ಜ್ಯೋತಿರಾಜ್ ಅಲಿಯಾಸ್, ಕೋತಿರಾಜ್ ಅವರು ಇಂದು ಕಾರ್ಕಳದ ಸಾಲ್ಮರ ಬಳಿ ಇರುವ ಸಮೃದ್ಧಿ ಹಿಲ್ಸ್ ಬಹು ಮಹಡಿ ಕಟ್ಟಡವನ್ನು ಏರಿ ಸಾಹಸ ಪ್ರದರ್ಶಿಸಿದರು. ಅವರ ಈ ಸಾಹಸವನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪೊಲೀಸರು ನೆರೆದಿದ್ದರು.