
ರಾಜ್ಯದಲ್ಲಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್ ಪಡೆಯಬೇಕು : ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ
Wednesday, February 15, 2023
ಬೆಂಗಳೂರು : ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ ಹೀಗಾಗಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್ ಪಡೆಯಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅನುಪಯುಕ್ತ ರಾಸುಗಳನ್ನು ಮೊದಲೆಲ್ಲಾ ಮಾರಾಟ ಮಾಡುತ್ತಿದ್ದರು. ಈಗ ಅಂತಹ ಸನ್ನಿವೇಶ ಇಲ್ಲ ಗೋಶಾಲೆಗೆ ಮಾರ ಬೇಕಾಗಿದೆ. ಗೋಶಾಲೆಗಳು ಸರಿಯಾಗಿ ನಡೆಯುತ್ತಿಲ್ಲ.
ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ನಿತ್ಯ 94 ಲಕ್ಷ ಲೀಟರ್ ಹಾಲು ಬಳಸಲ್ಪಡುತ್ತದೆ. ಈಗ 76 ಲಕ್ಷಲೀಟರ್ ಹಾಲು ಉತ್ಪಾದನೆ ಆಗ್ತಿದೆ. ರೈತರಿಗೆ ಇದರಿಂದ ಪ್ರತಿದಿನ 6.66 ಲಕ್ಷ ನಷ್ಟವಾಗುತ್ತಿದೆ. ಸರ್ಕಾರದ ಬೇಜವಾಬ್ದಾರಿತನ, ಉಡಾಫೆಯೇ ಇದಕ್ಕೆ ಕಾರಣ. ಹೀಗಾಗಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್ ಪಡೆಯಬೇಕೆಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ.