ಮಂಗಳೂರು: ಪೊಲೀಸ್ ಅಧಿಕಾರಿಯಿದಲೇ ಸೆಕ್ಸ್‌ಗೆ ಆಹ್ವಾನ- ನ್ಯಾಯಾಧೀಶರಲ್ಲಿ ಅಳಲು ನೋಡಿಕೊಂಡ ಲಿಂಗತ್ವ ಅಲ್ಪಸಂಖ್ಯಾತೆ
Thursday, February 23, 2023
ಮಂಗಳೂರು: ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ. ಹಿರಿಯ ಅಧಿಕಾರಿಗಳೇ ಹೀಗೆ ಮಾಡಿದಲ್ಲಿ ನಾವು ಯಾರಿಗೆ ದೂರು ನೀಡುವುದು ಎಂದು ಲಿಂಗತ್ವ ಅಲ್ಪಸಂಖ್ಯಾತೆಯೋರ್ವರು ನ್ಯಾಯಾಧೀಶರ ಸಮಕ್ಷಮದಲ್ಲೇ ಅಳಲು ತೋಡಿಕೊಂಡಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ, ಅರಿವು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಗಂಭೀರ ಆರೋಪ ಮಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ದ.ಕ.ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಪ್ರತಿಕ್ರಿಯಿಸಿ, ಶೋಷಣೆಗೊಳಗಾಗುವ ಲಿಂಗತ್ವ ಅಲ್ಪಸಂಖ್ಯಾತರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕು.
ಟ್ರಾನ್ಸ್ಜೆಂಡರ್ ನವರು ಉಚಿತವಾಗಿ ನ್ಯಾಯ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ದೂರು ನೀಡಬಹುದು. ಪ್ರಾಧಿಕಾರದ ಸೇವೆಯು ಉಚಿತವಾಗಿರುತ್ತದೆ. ದೂರು ಬಂದಲ್ಲಿ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೂಡ ಪಡೆಯಲು ಅವಕಾಶವಿರುತ್ತದೆ ಎಂದು ಧೈರ್ಯ ತುಂಬಿದರು.
ನಮಗೆ ಈ ಹಾಳು ದಂಧೆ ಮಾಡಲು ನಮಗೆ ಇಷ್ಟವಿಲ್ಲ. ಎಲ್ಲಿಯಾದರೂ ಆದೀತು, ಯಾವುದೇ ಕಚೇರಿ ಸೇರಿದಂತೆ ಕಸ ಗುಡಿಸುವ ಕೆಲಸವಾದರೂ ಕೊಡಿಸಿ, ಒಳ್ಳೆಯ ಜೀವನ ನಡೆಸುತ್ತೇವೆ. ನೆಮ್ಮದಿಯಿಂದ ನಮ್ಮ ಪಾಡಿಗೆ ಇರುತ್ತೇವೆ ಎಂದು ಲಿಂಗತ್ವ ಅಲ್ಪಸಂಖ್ಯಾತೆ ಹನಿ ಎಂಬವರು ಹಿರಿಯ ಸಿವಿಲ್ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.