ಗೆಳತಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪ್ರಿಯಕರ : ಚಿಕಿತ್ಸೆ ಫಲಿಸದೆ ಗೆಳತಿ ಸಾವು
Wednesday, February 22, 2023
ದೆಹಲಿ : ಪರಸ್ಪರ ಪ್ರೀತಿಸಿದವರ ಮಧ್ಯೆ ಒಮ್ಮೆ ಬಿರುಕು ಉಂಟಾದರೆ ಅಲ್ಲಿ ಶುರುವಾಗುವ ವಾರ್ ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳಲಾಗುವುದಿಲ್ಲ. ಸದ್ಯ ರಾಷ್ಟ್ರ ರಾಜಧಾನಿ ಬೆಂಗಳೂರಿನಲ್ಲಿ ಪ್ರಿಯಕರನೊಬ್ಬ ಗೆಳತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಮಹಿಳೆಯ ಲಿವ್-ಇನ್ ಸಂಗಾತಿ ಆಕೆಗೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ, ಫೆಬ್ರವರಿ 10 ರಂದು ಯುವತಿ ತನ್ನ ಸಂಗಾತಿ ಮೋಹಿತ್ ಜೊತೆ ಜಗಳವಾಡಿದ್ದಳು. ಮೋಹಿತ್ ತನ್ನ ಸ್ನೇಹಿತನ ಮನೆಯಲ್ಲಿ ಡ್ರಗ್ಸ್ ಸೇವಿಸುತ್ತಿರುವುದನ್ನು ಮಹಿಳೆ ನೋಡಿದ್ದಳು. ಇದರಿಂದ ಕುಪಿತಗೊಂಡ ಮೋಹಿತ್ ತನ್ನ ಸಂಗಾತಿಯ ಮೇಲೆ ಎಣ್ಣೆ ಹಾಕಿ ಜೀವಂತ ಸುಟ್ಟು ಹಾಕಿದ್ದಾನೆ.
ಇನ್ನು ಸಂತ್ರಸ್ತ ತನ್ನ ಮೊದಲ ಪತಿಯನ್ನು ತೊರೆದು ಕಳೆದ 6 ವರ್ಷಗಳಿಂದ ಮೋಹಿತ್ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಸೋಮವಾರ, AIIMS ಟ್ರಾಮಾ ಸೆಂಟರ್, ಸಂತ್ರಸ್ತೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿ ಮೋಹಿತ್ ನನ್ನು ವಶಕ್ಕೆ ಪಡೆಯಲಾಗಿದ್ದು, ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.