-->
ಸೌದಿ ಅರೇಬಿಯಾದಲ್ಲಿ  ಒಂಟೆಗೆ ಢಿಕ್ಕಿ ಹೊಡೆದ ಕಾರು- ಮಂಗಳೂರಿನ 3 ಮಂದಿ ಸಾವು

ಸೌದಿ ಅರೇಬಿಯಾದಲ್ಲಿ ಒಂಟೆಗೆ ಢಿಕ್ಕಿ ಹೊಡೆದ ಕಾರು- ಮಂಗಳೂರಿನ 3 ಮಂದಿ ಸಾವು


ಮಂಗಳೂರು:  ಸೌದಿ ಅರೇಬಿಯಾದಲ್ಲಿ  ರಿಯಾದ್ ನಲ್ಲಿ  ರಸ್ತೆಯಲ್ಲಿದ್ದ ಒಂಟೆಗೆ ಕಾರು ಢಿಕ್ಕಿ ಹೊಡೆದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಮೂವರು  ಮೃತಪಟ್ಟಿರುವ ದಾರುಣ ಘಟನೆ  ನಡೆದಿದೆ.

ಈ ಘಟನೆ ರಿಯಾದ್ ನ  ಖುರೈಸ್ ರಸ್ತೆಯ ಬಳಿ  ನಡೆದಿದೆ.  ಘಟನೆಯಲ್ಲಿ ಹಳೆಯಂಗಡಿ‌ ಕದಿಕೆ ನಿವಾಸಿ ರಿಝ್ವಾನ್,  ಸುರತ್ಕಲ್ ಕೃಷ್ಣಾಪುರದ ಅಕೀಲ್, ಮಂಗಳೂರಿನ  ನಾಸಿರ್ ಸಾವನ್ನಪ್ಪಿದ್ದಾರೆ.

ಇವರ ಜೊತೆಗೆ ಪ್ರಯಾಣಿಸುತ್ತಿದ್ದ ಬಾಂಗ್ಲಾ  ದೇಶದ ಪ್ರಜೆ ಶಿಹಾಬ್ ಎಂಬಾತನು ಮೃತಪಟ್ಟಿದ್ದಾನೆ.

ಈ ನಾಲ್ಕು ಮಂದಿ ನಾಲ್ಕು ತಿಂಗಳ ಹಿಂದೆಯಷ್ಟೆ ರಿಯಾದ್ ಗೆ ತೆರಳಿದ್ದರು. ರಿಯಾದ್ ನಲ್ಲಿ  ರೆಸಿಡೆನ್ಸಿಯಲ್ ಪ್ರಮಾಣ ಪತ್ರ ಪಡೆಯಲು ಇಕಾಮ್ ಎಂಬ ಪ್ರಕ್ರಿಯೆಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ .

ಕಾರಿನಲ್ಲಿದ್ದವರು SAQCO ಎಂಬ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅಕೀಲ್ ಅವರು ಮಂಗಳೂರಿನ ಸುರತ್ಕಲ್ ಕೃಷ್ಣಾಪುರ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಮತ್ತು  ನಾಸಿರ್ ದ.ಕ ಜಿಲ್ಲೆಯ ನಿವಾಸಿಯಾಗಿದ್ದಾರೆ.

  ಮೃತದೇಹಗಳನ್ನು ರಿಯಾದ್ ನ ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99