YOUTUBE ನಲ್ಲಿ ದಿನಕ್ಕೆ 4 ಕೋಟಿ ಸ್ಟ್ರೀಮಿಂಗ್: ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ- VIDEO
ಇಲ್ಲಿಯವರೆಗೆ ಸಂಗೀತ ಪ್ರಪಂಚದ ಎಲ್ಲಾ ದಾಖಲೆಗಳು BTS, ಬ್ಲ್ಯಾಕ್ಪಿಂಕ್ ಬ್ಯಾಂಡ್ ಮತ್ತು ಟೇಲರ್ ಸ್ವಿಫ್ಟ್ ಹೆಸರಿನಲ್ಲಿದ್ದರೆ , ಇದೀಗ ಭಾರತೀಯ ಗಾಯಕಿ ಅಲ್ಕಾ ಯಾಗ್ನಿಕ್ ಇವರನ್ನೆಲ್ಲ ಮೀರಿಸಿ ಸಂಗೀತ ಲೋಕದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಅಲ್ಕಾ
ಯಾಗ್ನಿಕ್ 2022 ರ YOUTUBE ಗ್ಲೋಬಲ್ ಶ್ರೇಯಾಂಕಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಹಾಡಿರುವ ಹಾಡುಗಳನ್ನು ದಿನಕ್ಕೆ ಸರಾಸರಿ 4.2 ಕೋಟಿ ಬಾರಿ ವೀಕ್ಷಿಸಲಾಗಿದೆ. 2021 ರಲ್ಲಿ ಅಭಿಮಾನಿಗಳು ಅವರ ಧ್ವನಿಯನ್ನು ಹದಿನೇಳು ನೂರು ಕೋಟಿ ಬಾರಿ ಕೇಳಿದ್ದಾರೆ. ಇದಕ್ಕೂ ಮುನ್ನ ಇಂಥ
ರೆಕಾರ್ಡ್ ಯಾರೂ ಮಾಡಿಲ್ಲ. ಇದರೊಂದಿಗೆ ಅಲ್ಕಾ ಸತತ ಮೂರನೇ ಬಾರಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಅಲ್ಕಾ
ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಹಾಡಲು ಆರಂಭಿಸಿದ್ದರು. ಇವರು 4 ದಶಕಗಳಿಗೂ ಹೆಚ್ಚು
ಕಾಲ ತನ್ನ ಸುಮಧುರ ಕಂಠದಿಂದ ಪ್ರೇಕ್ಷಕರನ್ನು ಮನಸೂರೆಗೊಳಿಸಿದ್ದಾರೆ.
ಅಲ್ಕಾ ಯಾಗ್ನಿಕ್ ಬಾಲಿವುಡ್ ನ ಪ್ರಸಿದ್ಧ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ತೇಜಾಬ್
ಚಿತ್ರದ 'ಏಕ್...ದೋ...ತೀನ್' ದಿಂದ ಚೈನಾ ಗೇಟ್ ಚಿತ್ರದ 'ಚಮ್ಮಾ ಚಮ್ಮಾ' ವರೆಗೆ ಸಿನಿಮಾ, ಆಲ್ಬಂ ಸೇರಿದಂತೆ ಅಲ್ಕಾ 20 ಸಾವಿರಕ್ಕೂ ಹೆಚ್ಚು
ಹಾಡುಗಳನ್ನು ಹಾಡಿದ್ದಾರೆ.
ಇವರು
ಏಳು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬಾಲಿವುಡ್ ಸಂಗೀತ ಉದ್ಯಮದಲ್ಲಿ ಇವರು ಹೆಚ್ಚಾಗಿ ಸೋಲೊ ಹಾಡುಗಳನ್ನು ಹಾಡಿದ್ದಾರೆ. ಕಳೆದ 2022 ನೇ ವರ್ಷದಲ್ಲಿ ಅವರು
YOUTUBE ನಲ್ಲಿ ಅತ್ಯಧಿಕ ಸ್ಟ್ರೀಮ್
ಮಾಡಲಾದ ಗಾಯಕಿ ಎಂಬ ಅಪರೂಪದ ಗೌರವ ಪಡೆದುಕೊಂಡಿದ್ದಾರೆ.
ಗಿನ್ನೆಸ್
ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವರದಿಯ
ಪ್ರಕಾರ, ಅಲ್ಕಾ ಅವರ ಹಾಡುಗಳು 15.3 ಬಿಲಿಯನ್ ಬಾರಿ STREAM ಆಗಿವೆ.
ಇದು ದಿನಕ್ಕೆ ಸರಾಸರಿ 42 ಮಿಲಿಯನ್ STREAM ಆಗುತ್ತದೆ.
ಅವರು ಕಳೆದ ಎರಡು ವರ್ಷಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಅಲ್ಕಾ
2021 ರಲ್ಲಿ 17 ಬಿಲಿಯನ್STREAM ಪಡೆದಿದ್ದರು
ಮತ್ತು 2020 ರಲ್ಲಿ 16.6 ಬಿಲಿಯನ್ STREAM ಹೊಂದಿದ್ದರು.
14.7 ಬಿಲಿಯನ್ STREAM ಗಳೊಂದಿಗೆ ಬ್ಯಾಡ್ ಬನ್ನಿ
(Bad Bunny) ಪಟ್ಟಿಯಲ್ಲಿ
ಎರಡನೇ ಸ್ಥಾನದಲ್ಲಿದ್ದಾರೆ. ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಶ್ರೀದೇವಿ ಸೇರಿದಂತೆ ಖ್ಯಾತನಾಮ ತಾರೆಯರಿಗೆ ಅಲ್ಕಾ ಯಾಗ್ನಿಕ್ ಹಿನ್ನೆಲೆ ಗಾಯನ ಮಾಡಿದ್ದಾರೆ. ಅವರ ದೊಡ್ಡ ಹಿಟ್ಗಳಲ್ಲಿ ಪರದೇಸಿ ಪರದೇಸಿ, ಗಜಬ್ ಕಾ ಹೈ ದಿನ್,
ತಾಲ್ ಸೆ ತಾಲ್ ಮಿಲಾ
ಮತ್ತು ಇತ್ತೀಚಿನ ಅಗರ್ ತುಮ್ ಸಾಥ್ ಹೋ ಹಾಡುಗಳು ಸೇರಿವೆ.
ಕೋಲ್ಕತ್ತಾದ
ಗುಜರಾತಿ ಕುಟುಂಬದಲ್ಲಿ ಜನಿಸಿದ ಅಲ್ಕಾ ಅವರ ತಂದೆ ಧರ್ಮೇಂದ್ರ ಶಂಕರ್ ಮತ್ತು ತಾಯಿ ಶುಭಾ. ತಾಯಿ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿದ್ದುದರಿಂದ ಬಾಲ್ಯದಿಂದಲೇ ಅಲ್ಕಾಗೆ ಸಂಗೀತ ತರಬೇತಿ ನೀಡಿದರು. ಅಲ್ಕಾ ಆರನೇ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಹಾಡಿದಾಗ, ರಾಜ್ ಕಪೂರ್ ಅವರ ಧ್ವನಿಯಲ್ಲಿನ ಮಾಧುರ್ಯವನ್ನು ಗುರುತಿಸಿದ್ದರು ಮತ್ತು ಅವರನ್ನು ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಅವರಿಗೆ ಶಿಫಾರಸು ಮಾಡಿದ್ದರು.