ಬ್ರೇಕಿಂಗ್: 'ಡಿಕೆಶಿ ರಾಜಕಾರಣಿ ಆಗಲು ನಾಲಾಯಕ್'- ಸುದ್ದಿಗೋಷ್ಠಿ ಆರಂಭದಲ್ಲೇ ಅಬ್ಬರಿಸಿದ ಸಾಹುಕಾರ
Monday, January 30, 2023
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ರಾಜಕಾರಣಿ ಆಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೀವನದಲ್ಲಿ ಮೊದಲ ಬಾರಿಗೆ ವೈಯಕ್ತಿಕ ವಾಗ್ದಾಳಿ ನಡೆಸಿರುವೆ. ಡಿ.ಕೆ. ಶಿವಕುಮಾರ್ ಮಹಿಳೆಯನ್ನು ಬಿಟ್ಟು ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಲು ಯತ್ನಿಸಿದರು. ಅಷ್ಟೇ ಅಲ್ಲದೆ ರಾಜಕಾರಣಕ್ಕೆ ಬಂದಾಗ ಡಿಕೆಶಿ ಸಿಂಪಲ್ ಆಗಿದ್ದ. ಈಗ ಅವನು ಶ್ರೀಮಂತನಾಗಿ ಬೆಳೆದಿದ್ದಾನೆ. ಸಿಡಿ ಹಗರಣದಲ್ಲಿದ್ದ ಯುವತಿ, ಡ್ರೈವರ್ ಸೇರಿ ವಿವಿಧ ಆರೋಪಿಗಳನ್ನು ಬಂಧಿಸಬೇಕು ಎಂದರು.