UDUPI : ಹುಡುಗಿಯೊಬ್ಬಳು ಜೊತೆ ನಾಯಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಕೊಂದ ವಾರ್ಡನ್..!
Saturday, January 28, 2023
ನಾಯಿ ಜೊತೆ ಹುಡುಗಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಪಾಪಿ ವಾರ್ಡನ್ ಕೊಂದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ ಎಂಬಲ್ಲಿ ನಡೆದಿದೆ.
ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಕಾಲೇಜಿನ ಹಾಸ್ಟೆಲ್ ಆವರಣದ ಒಳಗಡೆ, ವಿದ್ಯಾರ್ಥಿನಿ ನಾಯಿ ಮರಿ ಜೊತೆ ಆಟವಾಡುತ್ತಿದ್ದಳು. ಇದನ್ನು ಗಮನಿಸಿ, ಹಾಸ್ಟೆಲ್ ವಾರ್ಡನ್, ರಾಜೇಶ್ ಹಾಗೂ ನಾಗರಾಜ್ ಇಬ್ಬರು ನಾಯಿಮರಿಯನ್ನು ಹೊಡೆದು ಕೊಂದಿದ್ದಾರೆ. ನಾಯಿ ಮರಿಯನ್ನು ಕೊಲ್ಲುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಶ್ವಾನ ಪ್ರೇಮಿಗಳು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮಾನವೀಯತೆ ಮರೆತು ನಾಯಿಮರಿ ಕೊಂದವರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.