UDUPI : ಬಸ್ ನಿಂದ ಬಿದ್ದ ಕೆಳಗೆ ಬಿದ್ದು, ಚಕ್ರದಡಿ ಸಿಲುಕಿ ಯುವಕ ಸಾವು..!
Saturday, January 28, 2023
ಬಸ್ ನಿಂದ ಬಿದ್ದ ಕೆಳಗೆ ಬಿದ್ದ ಯುವಕನೊಬ್ಬ ಚಕ್ರದಡಿ ಸಿಲುಕಿ ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಹೆಮ್ಮಾಡಿ ಬಳಿ ನಡೆದಿದೆ. ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ ಸುದೀಪ್ (20) ಮೃತಪಟ್ಟ ಯುವಕ.
ಸುದೀಪ್ ಸಾಗರದಿಂದ ಕುಂದಾಪುರ ಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ. ಬಸ್ ರಶ್ ಇದ್ದ ಕಾರಣ ಪೂಟ್ ಬೋರ್ಡ್ ಮೇಲೆ ಸುದೀಪ್ ನಿಂತಿದ್ದ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಇಳಿಸಲು ಡ್ರೈವರ್, ಸಡನ್ ಬಸ್ ನಿಲ್ಲಿಸಿದಾಗ ಸುದೀಪ್ ಬ್ಯಾಲೆನ್ಸ್ ತಪ್ಪಿ, ಬಸ್‌ನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್ ಚಕ್ರದಡಿ ಬಿದ್ದ ಸುದೀಪ್‌ನ ಸೊಂಟದ ಮೇಲೆ ಬಸ್ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸಂದೀಪ್ ಸಾವನ್ಪಿದ್ದಾನೆ.