ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ
Saturday, January 28, 2023
ದಕ್ಷಿಣಕನ್ನಡ : ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಎನ್‌ಐಎ ಚಾರ್ಜ್‌ಶೀಟ್ ವರದಿಯಲ್ಲಿ ಬಹಿರಂಗವಾಗಿದೆ.
ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಸುಳ್ಯದ ಬೆಳ್ಳಾರೆಯಲ್ಲಿನ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿತ್ತು.
ಎನ್‌ಐಎ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಹಲವು ವಿಚಾರ ಪ್ರಸ್ತಾಪಿಸಲಾಗಿದ್ದು, ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್, ಕೆ.ಎ.ಮಸೂದ್ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಮೊಹಮ್ಮದ್ ಮುಸ್ತಫಾ, ಎಂ.ಹೆಚ್.ತುಫೈಲ್ ಎಂ.ಆರ್.ಉಮರ್ ಫಾರೂಕ್ ಅಬೂಬಕರ್ ಸಿದ್ಧಿಕಿ ಎಂಬುವವರು ಅರಬ್ ದೇಶದಲ್ಲಿ ಪತ್ತೆಯಾಗಿದ್ದಾರೆ.ಸೌದಿಯಲ್ಲಿ ಆರೋಪಿಗಳನ್ನು ಬಂಧಿಸಲು ಎನ್‌ಐಎ ಭಾರೀ ಸ್ಕ್ಯಾನ್ ಮಾಡಿದ್ದಾರೆ. ಆರೋಪಿಗಳು ಸೌದಿಯಲ್ಲಿ ಸೈಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ 6 ಆರೋಪಿಗಳ ಸುಳಿವಿಗೆ ಒಟ್ಟು 24 ಲಕ್ಷ ಬಹುಮಾನ ಘೋಷಣೆ ಮಾಡಿತ್ತು
ಪ್ರವೀಣ್ ನೆಟ್ಟಾರು ಹತ್ಯೆಗೆ 3 ಬಾರಿ ಸ್ಕೆಚ್ !
ಪ್ರವೀಣ್ ನೆಟ್ಟಾರನ್ನು ಹತ್ಯೆಗೆ ಹಂತಕರ ತಂಡ 3 ಬಾರಿ ಸ್ಕೆಚ್ ಹಾಕಿತ್ತು. ಜುಲೈ 26 ರಂದು ಹೊಂಚುಹಾಕಿ ಪ್ರವೀಣ್ ಮೇಲೆ ತಲವಾರು ಬೀಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.ಕೇರಳ ನೋಂದಣಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಬೈಕ್ ಮೂಲಕ ಬಂದಿದ್ದ ಮೂವರ ತಂಡ ಈ ಕೃತ್ಯ ನಡೆಸಿತ್ತು